Site icon Ullalavani

ಉಳ್ಳಾಲಕ್ಕೆ ಹೋಗಲು ಪಾಸ್ ಪೋಟ್! ಕಲ್ಲಡ್ಕ ಭಟ್ ವಿವಾದಾತ್ಮಕ ಹೇಳಿಕೆ ಸಖತ್ ಟ್ರೋಲ್

UN NETWORK

ಉಳ್ಳಾಲ : ಉಳ್ಳಾಲಕ್ಕೆ ಹೋಗಲು ಪಾಸ್ ಪೋಟ್ ಕಡ್ಡಾಯ, ವಿಮಾನ ಕೂಡ ರೆಡಿಯಾಗಿದೆ… , ನೇತ್ರಾವತಿ ಬ್ರಿಡ್ಜ್ ನಲ್ಲಿ ಪಾಸ್‍ಪೋರ್ಟ್ ಚೆಕಿಂಗ್ ಸೆಂಟರ್ ಆರಂಭವಾಗಿದೆ. .. ಹೀಗೆ ಕಿನ್ಯಾ ಕೇಶವ ಶಿಶುಮಂದಿರದಲ್ಲಿ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.


ಉಳ್ಳಾಲಕ್ಕೆ ಹೋಗುವ ಸಿಟಿ ಬಸ್‍ಗೆ ಸ್ಟೇಟ್ ಬ್ಯಾಂಕ್ ಟು ಪಾಕಿಸ್ತಾನ್, ಶಾಸಕ ಯು.ಟಿ ಖಾದರ್ ಮತ್ತು ಕಲ್ಲಡ್ಕ ಭಟ್ ಜತೆಯಾಗಿ ಮಾತನಾಡುತ್ತಿರುವುದು ` ಪಾಕಿಸ್ತಾನದ ಪ್ರಧಾನಿ ಜತೆಗೆ ಓಮ್ನಿಸ್ತಾನದ ಪ್ರಧಾನಿಯ ಮಾತುಕತೆ ‘ ಪಾಸ್ ಪೋರ್ಟ್ ಚೆಕಿಂಗ್ ಸೆಂಟರ್ ಹೀಗೆ ವಿವಿಧ ರೀತಿಯಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಟ್ರೋಲ್ ಆಗಿ ತಿರುಗಾಡುತ್ತಿದೆ. ಭಟ್ ಅವರ ಹೇಳಿಕೆಗಳು ಬಿಸಿ ವಾತಾವರಣಕ್ಕೆ ಕಾರಣವಾಗುತ್ತಿದ್ದರೂ, ಟ್ರೋಲಿಗರು ವಿಚಾರವನ್ನು ಹಾಸ್ಯಾಸ್ಪದವಾಗಿ ಸ್ವೀಕರಿಸಿದ್ದಾರೆ.

Exit mobile version