Site icon Ullalavani

ಮನೆಮುಂದೆ ನಿಲ್ಲಿಸಿದ ವಾಹನಗಳು ಎಸ್ಕೇಪ್ ಖತರ್‍ನಾಕ್ ಗ್ಯಾಂಗ್ ಬಗ್ಗೆ ಎಚ್ಚರವಿರಿ

UN NEWS NETWORKS

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಾಲ್ವರ ಖತರ್‍ನಾಕ್ ಗ್ಯಾಂಗ್ ವಾಹನ ಕಳವು ಜಾಲದಲ್ಲಿ ಸಕ್ರಿಯವಾಗಿದೆ. ರಸ್ತೆ ಬದಿಯಲ್ಲಿ ಅಥವಾ ರಸ್ತೆ ಬದಿಯ ಮನೆಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ. ಕಳವುಗೈದ ವಾಹನಗಳನ್ನು ಕೇರಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಎದುರುಗಡೆ ನಿಲ್ಲಿಸಿದ್ದ ವಾಹನಗಳನ್ನು ಇಬ್ಬರ ತಂಡ ಕಳವು ನಡೆಸಿತ್ತು. ಪ್ರಕರಣ ಸಂಬಂಧ ಸಿಸಿಟಿವಿಯಲ್ಲಿ ದಾಖಲೆಗಳನ್ನು ಸಂಗ್ರಹಿಸಿದ ಉಳ್ಳಾಲ ಪೊಲೀಸರು ತಂಡವನ್ನು ಒಂದು ವಾರದಲ್ಲಿ ಪತ್ತೆಹಚ್ಚುವಲ್ಲಿ ಸಫಲರಾಗಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದರೂ ಸಂಶಯದ ಮೇರೆಗೆ ಮನೆಗೆ ನುಗ್ಗಿ ಬಂಧಿಸಿದ್ದರು. ವಿಚಾರಣೆ ವೇಳೆ ಇಬ್ಬರಿಂದ ನಾಲ್ಕು ಬೈಕ್ ಗಳನ್ನು ವಶಪಡಿಸಲಾಗಿತ್ತು. ಘಟನೆ ನಡೆದ ಒಂದೇ ವಾರದಲ್ಲಿ ಇದೀಗ ನಾಲ್ವರ ಖತರ್‍ನಾಕ್ ಗ್ಯಾಂಗ್ ಸಕ್ರಿಯವಾಗಿದೆ. ಕೊಲ್ಯ ಸಂಸ್ಥೆಯೊಂದರಿಂದ ಮೂರು ದಿನಗಳ ಹಿಂದಷ್ಟೇ ಬೈಕ್ ಕಳವು ನಡೆಸಲಾಗಿತ್ತು. ಈ ಕುರಿತು ಸಿಸಿಟಿವಿ ದಾಖಲೆಗಳು ಲಭ್ಯವಾಗಿದ್ದು, ನಾಲ್ವರ ತಂಡ ಕಳವು ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಇಬ್ಬರು ಹೈವೇ ನಲ್ಲಿ ಬೈಕ್ ನಿಲ್ಲಿಸಿದರೆ, ಇನ್ನಿಬ್ಬರು ಬೈಕ್ ಕಳವು ನಡೆಸಿದ್ದಾರೆ. ನಪುಂಸಕ ಕಳ್ಳರು ಸಂಸ್ಥೆ ಹೊರಗೆ ಇಡಲಾಗಿದ್ದ ಫಿನಾಯಿಲ್ ಬಾಟಲಿಯನ್ನು ಕಳವುಗೈದಿದ್ದಾರೆ.

ಪ್ರತಿ ಸಿಸಿಟಿವಿಯಲ್ಲೂ ದಾಖಲೆ
ಕೊಲ್ಯದಿಂದ ಕಳವು ನಡೆಸಿದ ಕಳ್ಳರ ಕೃತ್ಯ ಕೊಲ್ಯ, ಬೀರಿ, ತಲಪಾಡಿ ಟೋಲ್, ಕೆ.ಸಿರೋಡು, ಸಿಸಿಟಿವಿ ದಾಖಲೆಯಿಂದ ಪಡೆಯಲಾಗಿದೆ. ಪೊಲೀಸರಿಗೆ ಓರ್ವನ ಸುಳಿವು ದೊರೆತಿದ್ದು, ಆತನ ಪತ್ತೆಗಾಗಿ ಬಲೆಬೀಸಲಾಗಿದೆ.

Exit mobile version