Site icon Ullalavani

ಕಿನ್ಯ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕಿನ್ಯ : ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮಾಲಿನಿ ನಾರಾಯಣ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಸಿರಾಜುದ್ಧೀನ್ ಕಿನ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್ನಲ್ಲಿ ೧೨ ಸದಸ್ಯರಲ್ಲಿ ಬಿಜೆಪಿಯ ಓರ್ವ ಸದಸ್ಯೆ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೧ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿರುವ ಮಾಲಿನಿ ಪ್ರಥಮ ಬಾರಿಗೆ ಪಂಚಾಯತ್ ಸದಸ್ಯರಾಗಿದ್ದು, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿರಾಜುದ್ಧೀನ್ ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದವರು.

ಜಿಲ್ಲಾ ಶಿಕ್ಷಣಾಧಿಕಾರಿ ಎಂ.ಪಿ. eನೇಶ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹುಸೇನ್ ಕುಂಇ, ಎಂ.ಎ. ಮಹಮ್ಮದ್ ಬಶೀರ್, ಸ್ಥಳೀಯ ಜಮಾತ್ ಕಾರ್ಯದರ್ಶಿ ಅಬುಸಾಲಿ, ಕೃಷ್ಣಪ್ಪ ಪೂಜಾರಿ, ಪಿ.ಕೆ. ಅಬೂಬಕ್ಕಾರ್, ಅಬ್ಬು ಕುರಿಯ, ಪಂಚಾಯತ್ ಸದಸ್ಯರಾದ ಮಹಮ್ಮದ್, ಅಬುಸಾಲಿ, ಫಾರೂಕ್, ಮಹಾಬಲ ಪೂಂಜಾ, ಮೈಮುನಾ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಸುರೇಖಾ ಉಪಸ್ಥಿತರಿದ್ದರು.

Exit mobile version