Site icon Ullalavani

ಅಂಬ್ಲಮೊಗರು: ಅಧ್ಯಕ್ಷರಾಗಿ ರಫೀಕ್ ಅಂಬ್ಲಮೊಗರು ಉಪಾಧ್ಯಕ್ಷೆಯಾಗಿ ಯಶೋಧ ಕೆ ಆಯ್ಕೆ

 

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಫೀಕ್ ಅಂಬ್ಲಮೊಗರು ಮತ್ತು ಉಪಾಧ್ಯಕ್ಷೆಯಾಗಿ ಯಶೋಧ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್ನಲ್ಲಿ ೧೩ ಸದಸ್ಯರಲ್ಲಿ ೧೦ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ೩ ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ರಫೀಕ್ ಈ ಹಿಂದೆ ಅಂಬ್ಲಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಯಶೋಧ ಗ್ರಾಮ ಪಂಚಾಯತ್ಗೆ ಪ್ರಥಮ ಬಾರಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮುಸ್ತಾಫ, ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ, ರವಿರಾಜ್ ರೈ, ಕರುಣಾಕರ ಪೂಜಾರಿ, ಲಕ್ಷ್ಮಿ ನರಸಿಂಹ ದೇವಸ್ಥಾನ ಮುಖ್ಯಸ್ಥ ಪದ್ಮನಾಭ ರೈ, ಕುಂಡೂರು ಜುಮಾ ಮಸೀದಿ ಅಧ್ಯಕ್ಷ ಶರೀಫ್, ಪಂಚಾಯತ್ ಮಾಜಿ ಅದ್ಯಕ್ಷ ವಿಠಲ ಶೆಟ್ಟಿ, ಸೀತಾರಾಮ ಸಾಲ್ಯಾನ್, ಬಿಲ್ಲವ ಸಂಘದ ಆಂಬ್ಲಮೊಗರು ಘಟಕದ ರವೀಂದ್ರ ಕುಕ್ಯಾನ್, ಪಂಚಾಯಿತಿ ಸದಸ್ಯರಾದ ಮನೋಹರ್, ಖಾದರ್, ಇಕ್ಬಾಲ್ ಎಸ್.ಎಂ. ಸಲೀಂ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್, ಕಾರ್ಯದರ್ಶಿ ಅಬೂಬಕ್ಕಾರ್ ಭಾಗವಹಿಸಿದ್ದರು.

Exit mobile version