Site icon Ullalavani

ಕೋಮುವಾದಿ-ಜಾತ್ಯಾತೀತ ಪಕ್ಷಗಳಿಂದ ಎಸ್‍ಡಿಪಿಐ ವಿರುದ್ಧ ಅಪಪ್ರಚಾರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಸಜಿಪ ಗ್ರಾಮದಲ್ಲಿ ಎಸ್‍ಡಿಪಿಐ- ಬಿಜೆಪಿ ನಡುವೆ ಮೈತ್ರಿ ನಡೆದಿದೆ ಅನ್ನುವ ಅಪಪ್ರಚಾರವನ್ನು sಮಾಡುತ್ತಿರುವ ಕೋಮುವಾದಿ ಪಕ್ಷ ಮತ್ತು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಸೋಲಿನಿಂದ ಹತಾಶೆಗೊಂಡು ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಸಜಿಪ ಗ್ರಾಮ ಪಂಚಾಯಿತಿ ಎಸ್ ಡಿಪಿಐ ಬೆಂಬಲಿತ ನೂತನ ಅಧ್ಯಕ್ಷ ನಾಸಿರ್ ಸಜಿಪ ಆರೋಪಿಸಿದ್ದಾರೆ.

ತೊಕ್ಕೊಟ್ಟು ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಆರು ವರ್ಷಗಳ ಹಿಂದೆ ಹುಟ್ಟು ಪಡೆದ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜಿಲ್ಲೆಯಲ್ಲಿ 274 ಕಡೆಗಳಲ್ಲಿ ಸ್ಪರ್ಧಿಸಿ 50 ಕಡೆಗಳಲ್ಲಿ ವಿಜಯ ಸಾಧಿಸಿದ್ದಾರೆ. ಕೆಲ ಕಡೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಎಸ್ ಡಿಪಿಐ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಬಹಳ ಕೆಲಸವನ್ನು ನಡೆಸಿದ್ದಾರೆ. ಸಜಿಪ ಗ್ರಾ.ಪಂ.ನಲ್ಲಿ 15 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಎಸ್ ಡಿಪಿಐ ಪಡೆದುಕೊಂಡರೆ, ಕಾಂಗ್ರೆಸ್ 5 ಮತ್ತು ಬಿಜೆಪಿ 3 ಸ್ಥಾನಗಳಲ್ಲಿ ಜಯಗಳಿಸಿದೆ. ಇಲ್ಲಿ ಎಸ್ ಡಿಪಿಐ ಅಧಿಕಾರಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಕಾಂಗ್ರೆಸ್ ಜತೆಗೆ ಕೈಜೋಡಿಸಿದ ಬಿಜೆಪಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕಣಕ್ಕಿಳಿಸಿತ್ತು. ಆದರೆ ಚುನಾವಣೆಯಲ್ಲಿ ಎಸ್ ಡಿಪಿಐ ಅಭ್ಯರ್ಥಿ ನಾಸಿರ್ ಸಜಿಪ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಆದರೂ ಅಪಪ್ರಚಾರವನ್ನು ನಡೆಸುವವರು 5 ಸ್ಥಾನಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ಕೇವಲ 3 ಸ್ಥಾನಗಳಿದ್ದ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಾರೆಂದರೆ ಇವರ ಮಧ್ಯೆ ಇರುವ ಸಂಬಂಧವನ್ನು ಗಮನಿಸಬೇಕಿದೆ. ಅದೇ ರೀತಿ ನರಿಂಗಾನ ಗ್ರಾ.ಪಂ.ನಲ್ಲಿ ಇರುವ 17 ಸ್ಥಾನಗಳಲ್ಲಿ ಕಾಂಗ್ರೆಸ್-9, ಬಿಜೆಪಿ-4, ಪಕ್ಷೇತರ-4 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ಕಾಂಗ್ರೆಸ್ ನ 4 ಸದಸ್ಯರು ಬಿಜೆಪಿ ಜತೆಗೆ ಸೇರಿ 1 ಪಕ್ಷೇತರ ಸಹಾಯದೊಂದಿಗೆ ಯುವ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಮೀನಂಕೋಡಿ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ನಳಿನಾಕ್ಷಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದರ ಮೂಲಕ ಎರಡು ಪಕ್ಷಗಳ ಒಳ ಒಪ್ಪಂದ ಬಹಿರಂಗವಾಗಿದೆ ಎಂದರು.

ಈ ಸಂದರ್ಭ ಎಸ್ ಡಿಪಿಐ ಮಂಗಳೂರು ವಿಧಾನಸಬಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ನಝೀರ್ ತುಂಬೆ, ಇಕ್ಬಾಲ್ ಎಸ್.ಎನ್, ಇಕ್ಬಾಲ್, ಹ್ಯಾರೀಸ್ ಮಲಾರ್ ಉಪಸ್ಥಿತರಿದ್ದರು.

Exit mobile version