Site icon Ullalavani

ಶಾಂತಿಯುತ ಸಮಾಜಕ್ಕಾಗಿ ಬ್ರಹ್ಮಶ್ರೀಗಳ ತತ್ವಗಳು ಆದರ್ಶ : ಶಿವಾನಂದ ಕಾಚಾರ್

UN NETWORKS

ಉಳ್ಳಾಲ : ವಿಶ್ವಕ್ಕೆ ಮಾನವ ಧರ್ಮವನ್ನು ತೋರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಆದರ್ಶಗಳನ್ನು ಸ್ಮರಿಸುತ್ತಾ ಯುವಪೀಳಿಗೆಯನ್ನು ಬೆಳೆಯುವಂತೆ ಮಾಡಿದಾಗ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಗುತ್ತಿಗೆದಾರ ಶಿವಾನಂದ ಕಾಚಾರ್ ಅಭಿಪ್ರಾಯ ಪಟ್ಟರು.

ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಮಾನವರು ಸಮಾನರಾಗಿ ಸಹೋದರತೆಯಿಂದ ಬಾಳುವ ಸಿದ್ದಾಂತವನ್ನು ಕಾಪಾಡಿಕೊಂಡು ಬರಬೇಕು. ಬ್ರಹ್ಮಶ್ರೀಗಳು ಸಮಾಜಕ್ಕೆ ಅದನ್ನೆ ಬೋ„ಸಿದರೂ ಸದ್ಯ ಯುವಕರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಯುವಕರನ್ನು ಬ್ರಹ್ಮಶ್ರೀ ಗುರುಗಳ ಆದರ್ಶಗಳನ್ನು ಪಾಲಿಸುತ್ತಾ ಸರಿದಾರಿಗೆ ತರುವ ಪ್ರಯತ್ನವನ್ನು ಮಾಡಬೇಕಿದೆ ಎಂದರು.
ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ಧರ್ಮಗುರು ಡಾ| ಜೆ.ಬಿ ಸಲ್ದಾನ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಎಲ್ಲಾ ಧರ್ಮಗಳ ಬಗ್ಗೆ ಮಾಹಿತಿ ಇತ್ತು. ಏಸುದೇವರ ತಾಳ್ಮೆಯ ಬಗ್ಗೆಯೂ ಅವರು ಮಾತನಾಡುತ್ತಿದ್ದರು.ಆಧ್ಯಾತ್ಮಿಕದ ಆಳವಾದ ಚಿಂತನೆ ಅವರಲ್ಲಿ ಇತ್ತು. ಆಂತರಿಕ ಶುದ್ದತೆ ಮತ್ತು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಇದ್ದರೂ, ಶಾಲಾ ಪಠ್ಯದಲ್ಲಿ ನಾರಾಯಣ ಗುರುಗಳ ಬಗ್ಗೆ ಪ್ರಕಟಣೆ ಈವರೆಗೆ ಆಗದಿರುವುದು ಬೇಸರದ ವಿಚಾರ.ಈ ಕುರಿತ ಪ್ರಯತ್ನ ಸಂಘಟನೆಗಳಿಂದ ಆಗಬೇಕಿದೆ ಎಂದರು.
ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಕಟೀಲ್ ಗುರು ಸಂದೇಶ ನೀಡಿದರು.

ಕುಂಪಲ ಶ್ರೀ ಬಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಪಡುಮಲೆ ಗೆಜ್ಜೆಗಿರಿ ದೇಯಿಬೈದೆತಿ ಕೋಟಿ ಚೆನ್ನಯ್ಯ ಮೂಲಕ್ಷೇತ್ರದ ಮೊಕ್ತೇಸರ ಚಂದ್ರಶೇಖರ್ ಉಚ್ಚಿಲ್, ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ಕಿನ್ಯ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಭಂಡಾರಮನೆ ಕಿನ್ಯ ಇಲ್ಲಿನ ಆಡಳಿತ ಮೊಕ್ತೇಸರ ಬಾಬು ಶ್ರೀಶಾಸ್ತಾ ಕಿನ್ಯ ಮುಖ್ಯ ಅತಿಥಿಗಳಾಗಿದ್ದರು. ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಗೌರವಾಧ್ಯಕ್ಷ ಡಾ|ರಾಮಾನುಜಂ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಆನಂದ್ ಮಲಯಾಳಕೋಡಿ, ಶ್ರೀ ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಾವತಿ ಲಕ್ಷ್ಮಣ್, ಗೌರವಾಧ್ಯಕ್ಷೆ ಮೀನಾಕ್ಷಿ ಐತ್ತಪ್ಪ ಉಪಸ್ಥಿತರಿದ್ದರು.

ಈ ಸಂದರ್ಭ ಶ್ರೀ ನಾರಾಯಣಗುರು ಮಹಿಳಾ ಸಂಘದ ಮಾಜಿ ಗೌರವಾಧ್ಯಕ್ಷೆ ವಿಶಾಲಾಕ್ಷಿ.ಜೆ ಸೋಮೇಶ್ವರ ಅವರನ್ನು ಸನ್ಮಾನಿಸಲಾಯಿತು. ದಿ.ಜೆ. ಲಿಂಗಪ್ಪ ಪೂಜಾರಿ ಸ್ಮರಣಾರ್ಥ ಭಜನಾ ಪ್ರೋತ್ಸಾಹ ಪುರಸ್ಕಾರವನ್ನು ಧ್ಯಾನ್ ಕೊಲ್ಯ ಇವರಿಗೆ ನೀಡಲಾಯಿತು. ಅರ್ಚಕ ಜಯರಾಂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿ ಬ್ರಹ್ಮಶ್ರೀ ನಾರಾಯಣ ಗುರು ಮಹಾತ್ಮೆ ಎಂಬ ತುಳು ಯಕ್ಷಗಾನ ತಾಳಮದ್ದಳೆ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ವಿದೇಶಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ವೇಣುಗೋಪಾಲ್ ಸ್ವಾಗತಿಸಿದರು. ಕುಸುಮಾಕರ್ ಕುಂಪಲ, ಜಯಕುಮಾರ್ ಪರ್ಯತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಪುರುಷೋತ್ತಮ್ ಅಡ್ಕ ಪ್ರಸ್ತಾವನೆಗೈದರು. ಸೀತಾರಾಮ ಎಸ್. ಕರ್ಕೇರ ಬಹುಮಾನ ವಿತರಣಾ ಕಾರ್ಯ ನಿರ್ವಹಿಸಿದರು. ಪ್ರ.ಕಾರ್ಯದರ್ಶಿ ಈಶ್ವರ್ ಸುವರ್ಣ ಕನೀರುತೋಟ ವಂದಿಸಿದರು.

Exit mobile version