Site icon Ullalavani

ಸೆ.11-ಉಳ್ಳಾಲ ನಗರಸಭೆ ವಿರುದ್ಧ ಅಬ್ಬಕ್ಕ ಸರ್ಕಲ್‍ನಿಂದ ನಗರಸಭೆ ಕಚೇರಿಗೆ ಪ್ರತಿಭಟನಾ ಜಾಥಾ

UN NETWORKS

ಉಳ್ಳಾಲ : ಕಳೆದ ಒಂದು ವರ್ಷದಿಂದ ಉಳ್ಳಾಲ ನಗರಸಭೆಯಲ್ಲಿ ಚುನಾಯಿತ ಆಡಳಿತ ಬರದೆ ಕೆಲವೇ ಸ್ಥಾಪಿತ ಹಿತಾಸಕ್ತಿಗಳ ಅಣತಿಯಂತೆ ಉಳ್ಳಾಲದ ಆಡಳಿತ ನಡೆಯುತ್ತಿದ್ದು ಅಭಿವೃದ್ಧಿ ಕಾರ್ಯ ಕುಂಠಿತಗೊಂಡು ಉಳ್ಳಾಲದಲ್ಲಿ ಸಂವಿಧಾನಕ್ಕೂ ಬೆಲೆಯಿಲ್ಲ ಜನಪ್ರತಿನಿಧಿಗಳಿಗೂ ಬೆಲೆಯಿಲ್ಲದಂತಾಗಿದೆ ಉಳ್ಳಾಲದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮತ್ತು ಉಳ್ಳಾಲ ನಗರಸಭಾ ಅನ್ಯಾಯದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯನ್ನು ಸೆ. 11ರ ಬುಧವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿದ್ದು ಪ್ರತಿಭಟನೆಯಲ್ಲಿ ಪಕ್ಷ ಬೇಧ ಮರೆತು ಎಲ್ಲಾ ಸಂಘಟನೆಗಳು ಸಂಘ ಸಂಸ್ಥೆಗಳು ಒಟ್ಟು ಸೇರಿ ನಾಗರಿಕ ಹಿತರಕ್ಷಣಾ ಸಮಿತಿ ರಚಿಸಿ ಹೋರಾಟ ನಡೆಸಲಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಝಾಕಿರ್ ಉಳ್ಳಾಲ್ ತಿಳಿಸಿದರು.

ತೊಕ್ಕೊಟ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ಪಂಚಾಯತ್, ಪುರಸಭೆ, ನಗರಪಂಚಾಯತ್ ಆಗಿ ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಪರಿವರ್ತನೆ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ನಗರಸಭೆಯಲ್ಲಿ ಸಿಗುವ ಮೂಲಭೂತ ಸೌಕರ್ಯಗಳಾದ ದಾರಿದೀಪ, ಒಳಚರಂಡಿ, ಶುದ್ಧ ಕುಡಿಯುವ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಉಳ್ಳಾಲಕ್ಕೆ ಬಿಡುಗಡೆಯಾಗುವ ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಇದಕ್ಕೆ ಮುಖ್ಯವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕರು ವಿಧಾನಸಭೆಯಲ್ಲಿ ಸರಿಯಾಗಿ ದನಿಯೆತ್ತದೆ ಇರುವುದು ಮತ್ತು ಇಲ್ಲಿನ ಅ„ಕಾರಿಗಳ ಕಾರ್ಯ ವೈಖರಿಯಿಂದ ಆಗಿದ್ದು ಯಾವುದೇ ಸರಕಾರಿ ಕೆಲಸ ಆಗಬೇಕಾದರೂ ವಿಳಂಬ ಧೋರಣೆ ಮಾಡಲಾಗುತ್ತಿದೆ ಮತ್ತು ಉಳ್ಳಾಲ ನಗರಸಭೆಯಲ್ಲಿ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಇದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ 24 ಅಂಶಗಳ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ನಡೆಯಲಿದ್ದು, ಬೆಳಗ್ಗೆ 10ಗಂಟೆಗೆ ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್‍ನಿಂದ ಉಳ್ಳಾಲ ನಗರಸಭೆಯವರೆಗೆ ಜಾಥಾ ನಡೆದು ಆಲ್ಲಿ ಸಮಾರೋಪ ನಡೆಯಲಿದೆ ಎಂದರು. ಸಮಿತಿ ಅಧ್ಯಕ್ಷ ಯು.ಕೆ. ಮಹಮ್ಮದ್ ಮುಸ್ತಾಫ ಮತ್ತು ಉಪಾಧ್ಯಕ್ಷ ಯಶವಂತ ಪಿ. ಅಮೀನ್ ಮಾಹಿತಿ ನೀಡಿದರು.

ಈ ಸಂದರ್ಭ ಉಳ್ಳಾಲ ನಾಗರಿಕ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ದಿನಕರ ಉಳ್ಳಾಲ್, ಉಪಾಧ್ಯಕ್ಷರಾದ ಭಗವಾನ್ ದಾಸ್, ಕೋಶಾಧಿಕಾರಿ ಮುಸ್ತಾಕ್ ಅಹ್ಮದ್ ಪಟ್ಲ, ಸಂಘಟನಾ ಕಾರ್ಯದರ್ಶಿ ರಬೀರ್ ಉಳ್ಳಾಲ, ಕಬ್ಬೀರ್ ಕಾಸಿಂ ಉಳ್ಳಾಲ್, ದೀಪಕ್ ಕುವೆಲ್ಲೊ, ಅಶ್ರಫ್ ಕೋಡಿ ಉಪಸ್ಥಿತರಿದ್ದರು.

Exit mobile version