Site icon Ullalavani

ಮಲಾರ್ : ಸಾಧಕರಿಗೆ ಸನ್ಮಾನ ಕಾರ್ಯಕ್ರಮ

UN NETWORKS

ಕೊಣಾಜೆ : ಹರೇಕಳ ಗ್ರಾಮದ ಮಲಾರ್ ಮುಹಿಯ್ಯದ್ದೀನ್ ಜುಮಾ ಮಸೀದಿ, ನೂರುಲ್ ಇಸ್ಲಾಂ ಮದರಸದ ಹಳೆ ವಿದ್ಯಾರ್ಥಿ ಸಂಘ ಮತ್ತು ಎಂಇಎಸ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಲಾರ್ ಜಮಾಅತಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ 2019ನೇ ಸಾಲಿನ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊಹಮ್ಮದ್ ಸಂಶೀರ್ ಹಾಗೂ ದೇರಳಕಟ್ಟೆ ರೇಂಜ್ ಎಸ್‍ಕೆಎಸ್‍ಬಿವಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಎನ್.ಐ.ಎಂ.ವಿದ್ಯಾರ್ಥಿ ಹೈದರ್ ಅಲಿ ಹುಸೈನ್ ಇವರನ್ನು ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಮಸೀದಿಯ ಅಧ್ಯಕ್ಷ ಎಸ್.ಎಂ.ಆಸೀಫ್ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಸ್ತಾದ್ ಮುಹಮ್ಮದ್ ಹನೀಫ್ ಫೈಝಿ, ಉಪಾಧ್ಯಕ್ಷ ಮೊಹಮ್ಮದ್ ಮುಸ್ತಫಾ ಮಲಾರ್, ಮುಅಲ್ಲಿಂ ಉಸ್ತಾದ್ ಅಬ್ದುಲ್ ಹಕೀಮ್, ಸ್ಥಳೀಯ ಉಸ್ತಾದ್ ಹೈದರ್ ಹಿಮಮಿ, ಮಾಜಿ ಅಧ್ಯಕ್ಷ ಮೊಹಮ್ಮದ್ ಮಾಸ್ಟರ್, ಮಾಜಿ ಕಾರ್ಯದರ್ಶಿ ಮಜೀದ್ ಮಾಸ್ಟರ್ ಮುಖ್ಯ ಅತಿಥಿಗಳಾಗಿದ್ದರು.

ಝಾಹಿದ್ ಮಲಾರ್ ಸನ್ಮಾನಿತರನ್ನು ಪರಿಚಯಿಸಿದರು. ನಿಯಾಫ್ ಮಲಾರ್ ವಂದಿಸಿದರು. ಸದರ್ ಮುಅಲ್ಲಿಂ ಇರ್ಫಾನ್ ಮೌಲಾವಿ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.

Exit mobile version