Site icon Ullalavani

ಅಲ್ ಮದೀನದಲ್ಲಿ ಶರಫುಲ್ ಉಲಮಾ ಅನುಸ್ಮರಣೆ

UN NETWORKS

ಉಳ್ಳಾಲ: ಧರ್ಮದ ಅಭಿವೃದ್ಧಿಗಾಗಿ ಧಾರ್ಮಿಕ ಕ್ಷೇತ್ರಗಳನ್ನು ನಿರ್ಮಿಸಿ ಬಹಳಷ್ಟು ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುವ ಮೂಲಕ ಮಹತ್ತರ ಸಾಧನೆ ಮಾಡಿದ ಧಾರ್ಮಿಕ ಗುರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಆಗಿದೆ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಅವರು ಅಲ್ ಮದೀನ ವಠಾರದಲ್ಲಿ ಗುರುವಾರ ನಡೆದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ 40ನೇ ದಿನದ ಅನುಸ್ಮರಣೆ ಕಾರ್ಯ ಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಅನುಸ್ಮರಣಾ ಭಾಷಣ ಮಾಡಿದ ಪೇರೋಡ್ ಉಸ್ತಾದ್ ಅವರು ಅಬ್ಬಾಸ್ ಉಸ್ತಾದ್ ಅವರ ಸಾಧನೆಗಳ ಬಗ್ಗೆ ಪ್ರಖ್ಯಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ಧಾರ್ಮಿಕ ಕೇಂದ್ರ ದ ಅಗತ್ಯ ತೆ ಮತ್ತು ಧಾರ್ಮಿಕ ಶಿಕ್ಷಣ ಕೇಂದ್ರ ದ ಅಭಿವೃದ್ಧಿ ಗೆ ಅಬ್ಬಾಸ್ ಉಸ್ತಾದ್ ಮಾಡಿದ ಸಾಧನೆ ಯ ಬಗ್ಗೆ ವಿವರಿಸಿದರು.ರಫೀಕ್ ಸಅದಿ ದೇಲಂಪಾಡಿ, ಅಬ್ದುಲ್ ರಶೀದ್ ಝೈನಿ,ಯೆನೆಪೋಯ ಅಬ್ದುಲ ಕುಂಞ ಮಾತನಾಡಿದರು.ಬಾಯಾರ್ ತಂಙಳ್ ಸಮಾರೋಪ ದುವಾ ಮಾಡಿದರು.

ವೇದಿಕೆಯಲ್ಲಿ ಎಸ್‍ವೈಎಸ್ ಕೇರಳ ರಾಜ್ಯಾಧ್ಯಕ್ಷ ಪಂಜಿಕಲ್ಲ್ ತಂಙಳ್ ವಾಲೆಮೊಂಡೋವು ಉಸ್ತಾದ್,ಚಿತ್ತಾರಿ ಅಬ್ದುಲ್ಲ ಹಾಜಿ,ಎಸ್. ಪಿ.ಹಂಝ ಸಖಾಫಿ,ಇಸ್ಮಾಯಿಲ್ ಮುಸ್ಲಿಯಾರ್, ಎಸ್. ಕೆ.ಖಾದರ್ ಹಾಜಿ,ಏಷ್ಯನ್ ಬಾವಾ ಹಾಜಿ,ಆಲಿಕುಂಞ ಪಾರೆ, ಹಸನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.ಅಲ್ ಮದೀನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಮುನೀರ್ ಸಖಾಫಿ ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯಕ್ರಮ ದ ಪ್ರಯುಕ್ತ ಬುರ್ಧಾ ಮಜ್ಲಿಸ್, ಖತಮಲ್ ಕುರ್ ಆನ್ ನಡೆಯಿತು.

Exit mobile version