UN NETWORKS
ಕುತ್ತಾರು : ಪಂಡಿತ್ ಹೌಸ್ ನ ವಿಜಯ ಗೇಮ್ಸ್ ಟೀಮ್ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ರಾಗಸುರಭಿ 2.0 ದಿ ಆರ್ಟ್ ಆಫ್ ಮ್ಯೂಸಿಕ್ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿಜಯ ಗೇಮ್ಸ್ ಟೀಂ ಸಕ್ರಿಯ ಯುವಕರ ತಂಡವಾಗಿದ್ದು, ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಊರಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಕಲ್ಪಿಸಲು ಹೋರಾಡಿ ಯಶಸ್ಸನ್ನು ಕಂಡ ತಂಡ ಮುಂದೆಯೂ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.
ಈ ವೇಳೆ ಕಿರಿಯ ತುಳು ವಿದ್ವಾಂಸ ತಕ್ಷೀಲ್ ಎಂ ದೇವಾಡಿಗ, ಹೂಲಾ ಹೂಪ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಆದ್ಯಾ.ಎ, ಹಿಪ್ ಹಾಪ್ ಡ್ಯಾನ್ಸ್ ನ ಈಶಾನ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಕ್ರೀಡಾ ಕ್ಷೇತ್ರದ ಪ್ಲಾರ್ವಿಷಾ ವೆನಿಷಾ ಮೊಂತೇರೊ , ಬಬ್ಬುಕಟ್ಟೆ ಶಾಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿನಯ್ ಎಂಬವರನ್ನು ಸನ್ಮಾನಿಸಲಾಯಿತು.ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ, ಪೆರ್ಮನ್ನೂರು-ಮುನ್ನೂರು ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಭಾಕರ್ ಪಂಡಿತ್, ನಾಗರಾಜ್ ಸರ್ವೇಯರ್ ಕೊಲ್ಯ, ಬಂಟರ ಸಂಘದ ಉಳ್ಳಾಲ ವಲಯ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮುಖ್ಯ ಅತಿಥಿಗಳಾಗಿದ್ದರು.
ವಿಜಯ ಗೇಮ್ಸ್ ಟೀಂನ ಅಧ್ಯಕ್ಷ ಗುರುಪ್ರಸಾದ್ ಭಂಡಾರಿ ಸ್ವಾಗತಿಸಿದರು. ಗೌರವಾಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ ಪ್ರಸ್ತಾವನೆಗೈದರು. ರಜನೀಶ್ ನಾೈಕ್ ವಂದಿಸಿದರು.ಕಾರ್ಯಕ್ರಮದಲ್ಲಿ ಮಂಗಳೂರಿನ ರಾಂ ಪ್ರಕಾಶ್ ವರ್ಮಾ ಇವರ ಮ್ಯೂಸಿಕಲ್ ಫೀಸ್ಟ್ ಪ್ರೇಕ್ಷಕರನ್ನು ಆಕರ್ಷಿಸಿತು. ಕೇರಳದ ಕೊಳಾಚಿ ಮುತ್ತು ಹಾಗೂ ಕ್ಯಾಲಿಕಟ್ ನ ಪವಿತ್ರ ಅವರ ಹಾಡು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು.