Site icon Ullalavani

ಪೆರ್ಮನ್ನೂರು: ಗಾಂಜಾ ಆರೋಪಿಗಳ ಬಂಧನ

UN NETWORKS

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಚಿಂಬುಗುಡ್ಡೆ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಂದ 41 ಸಾವಿರ ಬೆಲೆ ಬಾಳುವ ಗಾಂಜಾ, ಬುಲೆಟ್ ಬೈಕ್ ಮತ್ತು ಆರು ಮೊಬೈಲ್‍ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಲ್ಲಿಕೋಟೆಯ ಪಲಾಯತ್ತಿಲ್ ನಿವಾಸಿ ಮೊಹಮ್ಮದ್ ಸಿನಾನ್ ಪಿ.(21), ತ್ರಿಶ್ಯೂರ್‍ನ ಕನ್ನತ್ತಿಪಡಕ್ಕಿಲ್ ನಿವಾಸಿ ಹಫೀಝ್ ಅಮೀನ್(21), ಕಣ್ಣೂರು ಬೈತೂಲ್ ಇಜಾ ನಿವಾಸಿ ಜುಹೈರ್ ಕೆ.ಪಿ(21), ಕಲ್ಲಿಕೋಟೆ ರಾಮಾನಾಥುರಕ್ಕರ ಪೇರೂಕ್ ನಿವಾಸಿ ಆದರ್ಶ್(20), ಕೋಝಿಕ್ಕೋಡ್ ಚುಂಗಂತಾಮರಶ್ಯೇರ ನಿವಾಸಿ ಮೊಹಮ್ಮದ್ ನಿಹಾಲ್ ಆರ್. ಕೆ(20), ಕೋಝಿಕೋಡ್ ವೆಂಗೋಳಿ ಪುರತ್ತ ನಿವಾಸಿ ಬಿಶ್ರುಲ್ ಹಫೀ(20), ಕೋಝಿಕೋಡ್ ಪುಡಿಯಾಡತ್ತಿಲ್ ನಿವಾಸಿ ಝಾಕಿರ್ ಅಲಿ ಪಿ.(22) ಬಂಧಿತ ಆರೋಪಿಗಳಾಗಿದ್ದು ಆರೋಪಿಗಳಿಂದ 41 ಸಾವಿರ ಮೌಲ್ಯದ 1 ಕಿಲೋ 103ಗ್ರಾಂ ತೂಕದ ಗಾಂಜಾ, ಒಂದು ಲಕ್ಷ ರೂ. ಮೌಲ್ಯದ ಬುಲೆಟ್ ಬೈಕ್ 23 ಸಾವಿರ ಮೌಲ್ಯದ 6 ಮೊಬೈಲ್ ಫೋನ್ ಮತ್ತು 460 ರೂ. ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಆರೋಪಿಗಳು ದೇರಳಕಟ್ಟೆ ಸಮೀಪ ವೈದ್ಯಕೀಯ ಕಾಲೇಜು ಪರಿಸರದಲ್ಲಿ ಗಾಂಜಾ ಮಾರಾಟ ಮಾಡುವವರಾಗಿದ್ದು ಎಲ್ಲಾ ಆರೋಪಿಗಳು ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೋಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್ ಮತ್ತು ಪೊಲೀಸ್ ಉಪ ನಿರೀಕ್ಷಕ ಗುರುವಪ್ಪ ಕಾಂತಿ, ವಿನಾಯಕ ತೊರಗಲ್ ಮತ್ತು ಸಿಬ್ಬಂದಿಗಳಾದ ಮನೋಹರ್, ರಂಜಿತ್, ಪ್ರಶಾಂತ್, ಲಿಂಗರಾಜ್, ಅಕ್ಬರ್ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Exit mobile version