Site icon Ullalavani

ಏನೂ ತಪ್ಪು ಮಾಡದ ಜೀವಗಳಿಗೆ ನ್ಯಾಯ ಕೊಡುವವರಾರು? ಪಿಡಬ್ಲ್ಯುಡಿ ಇಂಜಿನಿಯರುಗಳೇ?, ಸರಕಾರದ ಇಲಾಖಾ ಪ್ರಧಾನ ಕಾರ್ಯದರ್ಶಿಯೇ?

Ullalnews Network

ಮಂಗಳೂರು: ಜಿಲ್ಲೆಯ ಪುತ್ತೂರು ತಾಲೂಕಿನ ಕೌಡಿಚ್ಚಾರು ಮಡ್ಯಂಗಲ ಹೆದ್ದಾರಿ ಅವ್ಯವಸ್ಥೆಗೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಮಾಧ್ಯಮದ ವರದಿ ಬಳಿಕವೂ ಎಚ್ಚೆತ್ತುಕೊಳ್ಳದ ಹೆದ್ದಾರಿ ಅಧಿಕಾರಿಗಳೇ ನಾಲ್ಕು ಜೀವಗಳ ಬಲಿಗೆ ನೇರ ಹೊಣೆಯಾಗಿದ್ದಾರೆ ಅನ್ನುವ ಆರೋಪ ಸಾರ್ವಜನಿಕವಾಗಿ ಕೇಳಿಬಂದಿದೆ.

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿರುವ ಮಗಳನ್ನು ನೋಡಲು ಬಂದಿದ್ದ ಮಡಿಕೇರಿ ಶುಂಟಿಕೊಪ್ಪ ನಿವಾಸಿ ಅಂಚೆ ಇಲಾಖೆ ಸಿಬ್ಬಂದಿ ನಿಡ್ಯಮಲೆ ಅಶೋಕ್ (48), ಪತ್ನಿ ಅತ್ತೂರು ನಲ್ಲೂರು ಶಾಲೆಯ ಶಿಕ್ಷಕಿ ಹೇಮಲತಾ ಮಕ್ಕಳಾದ ಯಶಸ್ ಮತ್ತು ವರ್ಷಾ ಮೃತಪಟ್ಟಿದ್ದಾರೆ. ಕುಟುಂಬ ಬರುತ್ತಿದ್ದ ಆಲ್ಟೋ ಕಾರು ಮಾಣಿ ಮೈಸೂರು ಹೆದ್ದಾರಿಯ ಕೌಡಿಚ್ಚಾರು ಭಾಗದಲ್ಲಿ ತಡೆಬೇಲಿಯಿಲ್ಲದೆ ಕೆಳೆಗೆ ಉರುಳಿ ಕೆರೆಯೊಳಗೆ ಮುಳುಗಿದರಿಂದಾಗಿ ಅವಘಢ ಸಂಭವಿಸಿದೆ. ಪುತ್ತೂರು ಪೊಲೀಸರು ರಾ.ಹೆ ಇಲಾಖೆ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಯಾವ ಸೆಕ್ಷನ್ ದಾಖಲಿಸಿದ್ದಾರೆ ಅನ್ನುವುದು ಗೊತ್ತಿಲ್ಲ?).
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಮಾಣಿ-ಮೈಸೂರು ಹೆದ್ದಾರಿ ಅಭಿವೃದ್ಧಿಯನ್ನು ಕೆ ಆರ್ ಡಿಸಿಎಲ್ ಕೋಟಿಗಟ್ಟಲೆ ಜನರ ತೆರಿಗೆ ಖರ್ಚು ಮಾಡಿ ಕಾಮಗಾರಿ ನಡೆಸಿತ್ತು. ಸುರಕ್ಷಾ ಕ್ರಮವನ್ನು ಮೊದಲು ಜರಗಿಸಬೇಕಾಗಿದ್ದ ಇಂಜಿನಿಯರ್‍ಗಳು ಯಾವುದೇ ಕ್ರಮವನ್ನು ವಹಿಸದೇ ಇರುವುದು ಈ ಅಪಘಾತಕ್ಕೆ ಮುಖ್ಯ ಕಾರಣವೆಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ.
ಆದರೆ ಉದಯವಾಣಿ ಪತ್ರಿಕೆಯಲ್ಲಿ ವರದಿಗಾರ ರಾಜೇಶ್ ಪಟ್ರೆ ಆ.26 ರಂದೇ ಇದೇ ಪ್ರದೇಶದ ವರದಿಯನ್ನು ಮಾಡಿದ್ದರು. ಆದರೆ ಇಲಾಖೆಯಿಂದ ವರದಿಯನ್ನು ನೋಡಿಯೂ ಜಿಲ್ಲಾಧಿಕಾರಿಯಾಗಲಿ , ಲೋಕೋಪಯೋಗಿ ಸುಪರಿಟೆಂಡೆಂಟ್ ಇಂಜಿನಿಯರ್ ಆಗಲಿ , ಅಲ್ಲಿನ ಜನಸೇವಕ ಶಾಸಕರಾದ ಸಂಜೀವ ಮಠಂದೂರು ಆಗಲಿ ಈ ಬಗ್ಗೆ ಕ್ರಮವಹಿಸದ ಕಾರಣ ಅಮಾಯಕ ನಾಲ್ಕು ಜೀವಗಳು ದಾರುಣವಾಗಿ ಬಲಿಯಾಗಿವೆ.

ಸಂಪರ್ಕಿಸಿ :


ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
 ಅಧ್ಯಕ್ಷರು  
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

Ph: 080- 22024000  

cekrdcl@gmail.com
 mdkrdcl@gmail.com  


ಶಾಸಕ ಸಂಜೀವ ಮಠಂದೂರು
Mob No: 9448868971, 9449715759

Email:
sanjeevagowdamatandoor@gmail.com

Exit mobile version