UN NETWORKS
ಉಳ್ಳಾಲ : ಕುಡಿದ ಮತ್ತಿನಲ್ಲಿ ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಶುಕ್ರವಾರ ಸಂಭವಿಸಿದೆ.ಇಲ್ಲಿನ ನಾಗುರಿ ನಿವಾಸಿ ಪದ್ಮನಾಭ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಕುಡಿತದ ಚಟ ಹೊಂದಿದ್ದ ಕಾರಣ ಕುಡಿದ ಮತ್ತಿನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದೆಂದು ನೇತ್ರಾವತಿ ಸೇತುವೆಯ ಮೇಲೆ ನಿಂತು ನದಿಗೆ ಹಾರಿದ್ದಾನೆ, ಇದನ್ನು ಕಂಡ ಸ್ಥಳೀಯರು ಆತನನನ್ನು ರಕ್ಷಿಸಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.