UN NETWORKS
ಕೊಣಾಜೆ: `ಸೋಷಿಯಲ್ ಮೀಡಿಯಾ, ಪಬ್ಲಿಕ್ ಸ್ಪೇರ್ ಆಂಡ್ ದಿ ಯೂತ್: ಆ್ಯನ್ ಎಕ್ಸ್‍ಪ್ಲೋರೇಟರಿ ಸ್ಟಡಿ ಆಫ್ ಬೆಂಗಳೂರು ಅರ್ಬನ್’ ಎಂಬ ವಿಷಯದಲ್ಲಿ ಚಂದ್ರಲೇಖ ಜೆ.ಎಸ್ ಅವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿವಿಯು ಪಿ.ಎಚ್‍ಡಿ ಪದವಿ ನೀಡಿ ಗೌರವಿಸಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಕೆ.ಮರಿಸ್ವೇ ಅವರು ಮಾಗದರ್ಶನ ನೀಡಿದ್ದರು. ಚಂದ್ರಲೇಖ ಅವರು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಮಾಜಶಾಸ್ತ್ರಜ್ಞರಾದ ಪ್ರೊ.ಜೋಗನ್‍ಶಂಕರ್ ಅವರ ಪುತ್ರಿಯಾಗಿದ್ದಾರೆ.