Site icon Ullalavani

ಬೋಳಿಯಾರು ಉದ್ಯಮಿ ಪ್ರಭಾಕರ ಆಚಾರ್ಯ ಮೃತದೇಹ ಸುರತ್ಕಲ್ ನಲ್ಲಿ ಪತ್ತೆ

UN NETWORKS

ಬೋಳಿಯಾರು : ಬೋಳಿಯಾರು ಉದ್ಯಮಿ ಪ್ರಭಾಕರ ಆಚಾರ್ಯ ಅವರ ಮೃತದೇಹ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕ ಮಿತ್ರಪಟ್ನ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ.

ಕಳೆದ ಎರಡು ದಿನಗಳಿಂದ ಪ್ರಭಾಕರ್ ಆಚಾರ್ಯ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಮುಡಿಪು ಸಮೀಪ ಅವರ ಸ್ಕೂಟರ್ ಅನಾಥವಾಗಿ ಪತ್ತೆಯಾಗಿತ್ತು. ಈ ಕುರಿತು ಕೊಣಾಜೆ ಪೊಲೀಸ್ ಠಾಣೆ ಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮಿತ್ರಪಟ್ನ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಹಲವು ವರ್ಷಗಳಿಂದ ಪ್ರಭಾಕರ ಆಚಾರ್ಯ ಅವರು ಬೋಳಿಯಾರ್ ಜಂಕ್ಷನ್ನಿನಲ್ಲಿ ಜ್ಯುವೆಲ್ಲರಿ ಅಂಗಡಿ‌ ಸಹಿತ ಫೈನಾನ್ಸ್ ನಡೆಸುತ್ತಾ ಬಂದಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ನಡೆಸಿರುವ ಸಾಧ್ಯತೆಯಿದೆ ಅನ್ನುವ ಸಂಶಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.ಮೃತದೇಹದ ಪ್ಯಾಂಟಿನಲ್ಲಿ ಪ್ರಭಾಕರ ಆಚಾರ್ಯ ಅವರ ಆಧಾರ್ ಕಾರ್ಡ್ ಸಹಿತ ದಾಖಲೆಗಳು ಪತ್ತೆಯಾಗಿವೆ.ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version