UN NETWORKS
ತಲಪಾಡಿ : ತಲಪಾಡಿ ಗ್ರಾಮದ ದೇವಿನಗರ ನಿವಾಸಿಯಾಗಿರುವ ಗಿರಿದಾಸ್ ಪೂಜಾರಿಯವರು ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು ಅವರ ವೈದ್ಯಕೀಯ ವೆಚ್ಚಕ್ಕೆ ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ವತಿಯಿಂದ ಅಧ್ಯಕ್ಷ ಕೆ.ಟಿ.ಸುವರ್ಣರ ನೇತೃತ್ವದಲ್ಲಿ ಅವರ ಮನೆಗೆ ಭೇಟಿ ನೀಡಿ ಧನಸಹಾಯ ಮತ್ತು ಅಕ್ಕಿ ನೀಡಲಾಯಿತು.
ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಉಪಾಧ್ಯಕ್ಷ ಹರೀಶ್ ಮುಂಡೋಳಿ, ಜತೆ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ, ಪಾರ್ಥಸಾರಥಿ ಹಾಗೂ ಸುಕೃತ್ ಉಪಸ್ಥಿತರಿದ್ದರು.