Site icon Ullalavani

ಮಾಜಿ ಸಚಿವ ಯು.ಟಿ ಖಾದರ್ ಸಾರಥ್ಯದಲ್ಲಿ ಹುಲಿವೇಷಧಾರಿಗಳ ತಂಡ

UN NETWORKS

ತೊಕ್ಕೊಟ್ಟು : ಈ ಬಾರಿಯ ತೊಕ್ಕೊಟ್ಟು ಮೊಸರುಕುಡಿಕೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಸಾರಥ್ಯದ ಹುಲಿವೇಷಧಾರಿಗಳ ತಂಡ ಹೆಜ್ಜೆಹಾಕಿದೆ. ಓವರ್ ಬ್ರಿಡ್ಜ್ ಫ್ರೆಂಡ್ಸ್ ತೊಕ್ಕೊಟ್ಟು ಇವರ 51 ಹುಲಿ ಹುಲಿವೇಷಧಾರಿಗಳು ತಂಡದಲ್ಲಿ ವೇಷ ಹಾಕಿದ್ದಾರೆ.

ಹಲವು ವರ್ಷಗಳಿಂದ ತಂಡ ಹುಲಿವೇಷ ಧರಿಸುತ್ತಿದೆ. ಆದರೆ ಈ ಬಾರಿ ತಂಡದ ಸಾರಥ್ಯವನ್ನು ಮಾಜಿ ಸಚಿವ ಯು.ಟಿ.ಖಾದರ್ ವಹಿಸಿಕೊಂಡಿರುವುದು ವಿಶೇಷವಾಗಿದೆ. ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ಶುಕ್ರವಾರ ತಂಡ ಬಣ್ಣ ಹಚ್ಚಿತ್ತು. ಯುವಕರು, ಹಿರಿಯರು ಮಕ್ಕಳು ಸೇರಿದಂತೆ ಒಟ್ಟು 51 ಮಂದಿ ವೇಷ ಧರಿಸಿದ್ದಾರೆ. ತುಳುನಾಡಿನ ಸಂಸ್ಕೃತಿಗೆ ಸ್ಫೂರ್ತಿ ಕೊಡುವವರು ಇನ್ನಷ್ಟು ಬೇಕಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಂಡದ ಸಾರಥ್ಯ ವಹಿಸಿಕೊಂಡಿರುವೆನು. ತೊಕ್ಕೊಟ್ಟುವಿನಲ್ಲಿ ನಡೆಯುವ ಕೃಷ್ಣ ಜನ್ಮಾಷ್ಠಮಿಗೆ ಹಲವು ವರ್ಷಗಳ ಇತಿಹಾಸವಿದೆ. ಎಲ್ಲರೂ ಸೌಹಾರ್ದಯುತವಾಗಿ ಆಚರಿಸುವ ಉತ್ಸವ ಇದಾಗಿದೆ. ಸಾವಿರಾರು ಜನರು ಸೇರುವ ಉತ್ಸವ ನಾಡಿಗೆ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಂಡದ ನೇತೃತ್ವವನ್ನು ಪ್ರವೀಣ್ ಕುಮಾರ್ ಜೆ.ಪಿ, ಮುರಳೀ ಮೋಹನ್ ಸಾಲ್ಯಾನ್, ಸಚಿನ್ ಉಳ್ಳಾಲ, ಅರುಣ್ ಓವರ್ ಬ್ರಿಡ್ಜ್, ಟಿ.ಜಿ.ಗಣೇಶ್, ದೀಪಕ್ ಮೋಹನ್, ರಾಜೇಶ್ ಶೆಟ್ಟಿ, ಪವನ್ ಕುಮಾರ್ ಜೆ.ಪಿ ವಹಿಸಿಕೊಂಡಿದ್ದಾರೆ.

Exit mobile version