UN NETWORKS
ಬೋಳಿಯಾರ್ : ಆಂಗ್ಲಮಾಧ್ಯಮ ಶಿಕ್ಷಣದತ್ತ ಆಸಕ್ತರಾಗಿರುವ ಗ್ರಾಮೀಣ ಭಾಗದ ಗದ್ದೆಗಳಲ್ಲಿ ದುಡಿದು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ, ಆದರೆ ಗದ್ದೆಗಳಿಗೆ ಮಕ್ಕಳನ್ನು ಇಳಿಸಿ ಮಣ್ಣಿನ ಗುಣ, ನಮ್ಮ ಸಂಸ್ಕೃತಿ ತಿಳಿಸುವುದರಲ್ಲಿ ಹಿಂದುಳಿದಿದ್ದಾರೆ ಎಂದು ಬೋಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಅಭಿಪ್ರಾಯಪಟ್ಟರು.
ಬೋಳಿಯಾರ್ ಗ್ರಾಮದ ಧರ್ಮನಗರದಲ್ಲಿ ಶನಿವಾರ ನಡೆದ14ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ, ಸಮಾಜ ನಮ್ಮನ್ನು ಗುರುತಿಸಿಲ್ಲ ಎಂದು ಕೊರಗುವ ಬದಲು ನಾವು ಸಮಾಜಕ್ಕೇನು ಮಾಡಿದ್ದೇವೆ ಎನ್ನುವ ಬಗ್ಗೆ ಯೋಚಿಸುವುದು ಮುಖ್ಯ. ನಾವು ಸಮಾಜದಲ್ಲಿ ನಡೆಸುವ ಕಾರ್ಯ ಚಟುವಟಿಕೆಗಳು ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ತಿಳಿಸಿದರು.
ಪಜೀರ್ ಗೋವನಿತಾಶ್ರಯ ಟ್ರಸ್ಟ್ ನ ಟ್ರಸ್ಟಿ ರವಿ ರೈ ಪಜೀರ್, ಪತ್ರಕರ್ತ ವಿನಯಕೃಷ್ಣ ಭಟ್ ಕುರ್ನಾಡ್, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘದ ಅಧ್ಯಕ್ಷ ವಿಜಯ್ ಕುಮಾರ್ ಪಾವೂರು, ಹಿರಿಯ ಕೃಷಿಕ ನಾರಾಯಣ ರೈ ಧರ್ಮನಗರ, ಸಾಗರ್ ಪೂಜಾರಿ ಬಂಟ್ವಾಳ, ಕೃಷಿಕ ರಮೇಶ್ ಕರ್ಕೇರ, ಸಮಿತಿಯ ಗೌರವಾಧ್ಯಕ್ಷ ಪ್ರಶಾಂತ ಮಾರ್ಲ ಧರ್ಮ, ಅಧ್ಯಕ್ಷ ಹರೀಶ್ ಕರ್ಕೇರ, ಯುವ ಉದ್ಯಮಿ ನವೀನ್ ಶೆಟ್ಟಿ ಕೊಡಕ್ಕಲ್ ಮುಖ್ಯ ಅತಿಥಿಗಳಾಗಿದ್ದರು.
ಪದಾಧಿಕಾರಿಗಳಾದ ಸುಭಾಷ್ ಧರ್ಮನಗರ, ರೋಹಿನಾಥ್ ಶೆಟ್ಟಿ, ಕಿಶೋರ್ ಕುಮಾರ್ ನೀರೊಳ್ಕೆ ಉಪಸ್ಥಿತರಿದ್ದರು. ಯಶೋಧರ ಆಂಚನ್ ವಂದಿಸಿದರು. ತುಳು ಚಿತ್ರನಟ ಪ್ರಕಾಶ್ ಧರ್ಮನಗರ ಕಾರ್ಯಕ್ರಮ ನಿರೂಪಿಸಿದರು.
`ಇಂದು ಎಲ್ಲೆಡೆ ಕೆಸರಡ್ ಒಂಜಿ ದಿನ, ಆಟಿಡ್ ಒಂಜಿ ದಿನ ಕಾರ್ಯಕ್ರಮ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಬೋಳಿಯಾರ್ ನಲ್ಲಿ ಅಷ್ಟಮಿ ಸಂದರ್ಭ ಕೆಸರಿನಲ್ಲಿ ಕಾರ್ಯಕ್ರಮ ಅಯೋಜಿಸುವುದು ನಿಜಕ್ಕೂ ವಿಶೇಷ’
ವಿನಯಕೃಷ್ಣ ಭಟ್ ಕುರ್ನಾಡ್, ಪತ್ರಕರ್ತ