Site icon Ullalavani

ತೊಕ್ಕೊಟ್ಟು : ಕೊಡಗು ನೆರೆ ಪೀಡಿತರಿಗೆ ಪರಿಹಾರ

UN NETWORKS

ತೊಕ್ಕೊಟ್ಟು : ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಕೊಡಗು ನೆರೆ ಪೀಡಿತರಿಗೆ ಪರಿಹಾರ ಕಾರ್ಯವನ್ನು ತೊಕ್ಕೊಟ್ಟುವಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು.

ನೆರೆ ಪೀಡಿತರಿಗಾಗಿ ಸಂಗ್ರಹಿಸಿದ ಅಗತ್ಯ ಸಾಮಗ್ರಿಗಳನ್ನು ವಾಹನಗಳ ಮೂಲಕ ಕಳುಹಿಸುವ ಕಾರ್ಯಕ್ರಮ ನಡೆಯಿತು. ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರೊಫೆಸರ್ ಹನುಮಾನ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಅಬ್ದುಲ್ ಸಲಾಂ, ವಲಯ ಕಾರ್ಯದರ್ಶಿ ಇಲ್ಯಾಸ್, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಮತ್ತು ಸಂಘಟನಾ ಸದಸ್ಯರು ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಉಳಾಲ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Exit mobile version