UN NETWORKS
ಉಳ್ಳಾಲ : ಒಂಭತ್ತು ಮಾಗಣೆ ಸೀಮೆ ಗಟ್ಟಿಯವರ ಕುಲಸ್ವಾಮಿ ಶ್ರೀ ಸೋಮನಾಥ ಸೇವಾ ಸಮಿತಿ ಅಧ್ಯಕ್ಷರಾಗಿ ಯಾದವ ಗಟ್ಟಿ ಮಡ್ಯಾರ್ ಆಯ್ಕೆಯಾಗಿದ್ದಾರೆ.
ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಸಮಿತಿ ಅಧ್ಯಕ್ಷ ಕೆ.ಆರ್. ಗಟ್ಟಿ ಕೊರಂತೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವರಾಮ ಗಟ್ಟಿ ಉಳ್ಳಾಲ ಬೈಲು, ಕೋಶಾಧಿಕಾರಿಯಾಗಿ ಸತ್ಯಮೋಹನ್ ಪಾಂಡೇಶ್ವರ, ಕಾರ್ಯದರ್ಶಿಯಾಗಿ ಭಾಸ್ಕರ ಗಟ್ಟಿ ಕಾಪಿಕಾಡು, ಉಪಾಧ್ಯಕ್ಷರಾಗಿ ಕೆ. ಗೋಪಾಲರ್ಕಷ್ಣ ಕುಂಬ್ಳೆ, ಜೊತೆ ಕಾರ್ಯದರ್ಶಿಗಳಾಗಿ ಸದಾಶಿವ ಕೋಟೆಕಾರು, ಭುಜಂಗ ಗಟ್ಟಿ ಬೆಳ್ಮ ಕಟ್ಟಪುಣಿ ಮತ್ತು ಕಾರ್ಯಕಾರಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.