UN NETWORKS
ಉಳ್ಳಾಲ :ಮೊಗವೀರ ಸಂಘ ಉಳ್ಳಾಲ ಮೊಗವೀರಪಟ್ಣ ಇದರ ಆಶ್ರಯದಲ್ಲಿ ಉಳ್ಳಾಲ ಮೊಗವೀರ ಸಮಾಜದಿಂದ `ನಮ್ಮ ನಡಿಗೆ ಸೋಮನಾಥನ ಕಡೆಗೆ ಮತ್ತು ಸೋಮೇಶ್ವರ ಶ್ರೀ ಸೋಮನಾಥ ದೇವರಿಗೆ ಸಿಯಾಳಭಿಷೇಕ ಸೋಮವಾರ ನಡೆಯಿತು.
ಉಳ್ಳಾಲ ಮೊಗವೀರಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಭಜನೆಯೊಂದಿಗೆ ಸಿಯಾಳಾಭಿಷೇಕ ಮಾಡಿ ಸಮುದ್ರ ರಾಜನಿಗೆ ಬಾಗಿನವನ್ನು ಅರ್ಪಿಸಿ ಮತ್ಸ್ಯ ಸಂಪತ್ತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೊಗವೀರಪಟ್ಣ ಉಳ್ಳಾಲದ ಶ್ರೀ ವಿಠೋಭಾ ರುಕುಮಾಯಿ ಭಜನಾ ಮಂದಿರ ಮತ್ತು ಶ್ರೀ ರಾಮ ಭಜನಾ ಮಂದಿರದ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತನಾಡಿ ಶ್ರಾವಣ (ಸೋಣ )ತಿಂಗಳ ಪ್ರಥಮ ಸೋಮವಾರ ಪಾರಂಪರಿಕವಾಗಿ ಉಳ್ಳಾಲ ಮೊಗವೀರ ಸಮಾಜವು ಅನಾದಿ ಕಾಲದಿಂದಲೂ ಶ್ರೀ ಸೋಮನಾಥನಿಗೆ ಸಿಯಾಳಾಭಿಷೇಕ ನಡೆಸುವುದು ಸಂಪ್ರದಾಯವಾಗಿದ್ದು.ಹಿಂದೆ ಮೊಗವೀರ ಸಮಾಜದ ಬಾಂಧವರು ಭಜನೆಯ ಮೂಲಕ ಕಾಲ್ನಡಿಗೆಯಲ್ಲಿ ಬಂದು ಸಿಯಾಳಾಭಿಷೇಕ ನಡೆಸುತ್ತಿದ್ದರು.
ನಂತರದ ದಿನಗಳಲ್ಲಿ ಸಿಯಾಳಾಭಿಷೇಕ ಮುಂದುವರೆದರೂ ಕಾರಣಾಂತರದಿಂದ ಹಲವು ದಶಕಗಳ ಕಾಲ ಕಾಲ್ನಡಿಗೆಯಲ್ಲಿ ಭಜನಾ ಸಂಕಿರ್ಥನೆ ನಿಂತು ಹೋಗಿತ್ತು. ಕಳೆದ ಎರಡು ವರ್ಷದಿಂದ ಕಾಲ್ನಡಿಗೆಯ ಸಂಪ್ರದಯವನ್ನು ಪ್ರಾರಂಬಿಸಿದ್ದು ಈ ಬಾರಿ ಎರಡನೇ ವರ್ಷದ ಕಾರ್ಯಕ್ರಮವಾಗಿ ಯಶಸ್ವಿಯಾಗಿ ನಡೆಸಲಾಗಿದೆ ಎಂದರು. ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರದಾನ ಅರ್ಚಕ ಸುಭಾಷ್ ಪೂಜಾರಿ, ಆಡಳಿತ ಮೊಕ್ತೇಸರ ವಸಂತ ಅಮೀನ್ ಗುರಿಕಾರ, ಮದ್ಯಸ್ಥ ಗಂಗಾಧರ ಸುವರ್ಣ, ಗುರುಕಾರರಾದ ಸುರೇಂದ್ರ ಪುತ್ರನ್, ಸುರೇಂದ್ರ ಕರ್ಕೇರ, ರಘುವೀರ ಸಾಲ್ಯಾನ್, ದಯಾನಂದ ಚಂದನ್, ಪ್ರ. ಕಾರ್ಯದರ್ಶಿ ಶಂಕರ ಬಂಗೇರ, ಜೊತೆ ಕಾರ್ಯದರ್ಶಿ ರಾಜೇಶ್ ಪುತ್ರನ್, ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಆಡಳಿತ ಮಂಡಳಿ ಸದಸ್ಯರು, ಮೊಗವೀರ ಮಹಿಳಾ ವೇದಿಕೆಯ ಪ್ರದಾನ ಸಂಚಾಲಕಿ ಮೀನಾಕ್ಷಿ ಬಂಗೇರ ಮತ್ತು ಸದಸ್ಯರು ಭಕ್ತಾಧಿಗಳು ಭಾಗವಹಿಸಿದರು.