UN NETWORKS
ಸೋಮೇಶ್ವರ : ಕರಾವಳಿ ಕಲ್ಯಾಣ ಪರಿಷತ್ ಹಾಗೂ ಸೋಮೇಶ್ವರ ಶಕ್ತಿ ಕೇಂದ್ರ ಇದರ ವತಿಯಿಂದ ಸಮುದ್ರ ಪೂಜೆ ಸೋಮೇಶ್ವರ ರುದ್ರಪಾದೆಯ ತಟದಲ್ಲಿ ಶ್ರೀ ಮೂಕಾಂಬಿಕ ದೇವಸ್ಥಾನ, ಕೊಲ್ಯ ಇದರ ಟ್ರಸ್ಟೀ ಮಧುಸೂದನ್ ಆಯರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಥಿತಿಗಳಾಗಿ ಸುಧಾಕರ್ ಭಂಡಾರಿ, ಚಂದ್ರಹಾಸ ಪಿ. ಕನೀರ್ಥೋಟ ಭಾಗವಹಿಸಿದ್ದರು. ವಿಷ್ಣು ಸಹಸ್ರ ನಾಮದ ನಂತರ ಅರ್ಚಕರಾದ ಸದಾಶಿವ ಐತಾಳ್ ಅವರು ಗಂಗಾ ಮಾತೆಗೆ ಬಾಗಿನ ಸಮರ್ಪಿಸಿದರು. ಡಾಕ್ಟರ್ ಮಾಧವಿ ಕೋಟೆಕಾರು, ಚಂಚಲಕ್ಷಿ, ಸುರೇಖಾ, ರಮಣಿ, ಗುಣವತಿ ಆಚರ್, ವಸಂತ್ ಉಳ್ಳಾಲ್, ಜಯಂತ್ ಉಪಸ್ಥಿತರಿದ್ದರು.