Site icon Ullalavani

ಕಲ್ಲರಕೋಡಿ: ಎರಡು ಬಡ ಕುಟುಂಬಗಳಿಗೆ ಸೋಲಾರ್ ಲೈಟ್ ಅನುಷ್ಠಾನ ಕಾರ್ಯಕ್ರಮ

UN NETWORKS

ಮುಡಿಪು : ಕರ್ಣಾಟಕ ಬ್ಯಾಂಕ್ ಲಿ. ಹೀಲ್ಸ್ ಮಂಗಳೂರು, ಲಯನ್ಸ್ ಕ್ಲಬ್ ಮುಡಿಪು – ಕುರ್ನಾಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನರಿಂಗಾನ ಇದರ ಜಂಟಿ ಆಶ್ರಯದಲ್ಲಿ ಗ್ರಾಮದ ಎರಡು ಬಡ ಕುಟುಂಬಗಳಿಗೆ ಸೋಲಾರ್ ಲೈಟ್ ಅನುಷ್ಠಾನ ಕಾರ್ಯಕ್ರಮ ಕಲ್ಲರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮೋಹನ್, ವಲಯ ಒಕ್ಕೂಟ ಅಧ್ಯಕ್ಷ ನವೀನ್ ಪಾದಲ್ಪಾಡಿ, ಲಯನ್ಸ್ ಕ್ಲಬ್ ಮುಡಿಪು ಇದರ ಅಧ್ಯಕ್ಷರಾದ ಉಮೇಶ್ ಗಾಂಭೀರ್ ಬೋಳ್ಯಾರುಗುತ್ತು , ಹೀಲ್ಸ್ ಮಂಗಳೂರು ಅಧ್ಯಕ್ಷ ಅಜಿತ್ ಪೂಜಾರಿ , ಸೆಲ್ಕೋ ಮಂಗಳೂರು ವಲಯದ ಮ್ಯಾನೆಜರ್ ರವೀನ ಕುಲಾಲ್ ಹಾಗೂ ಗಣ್ಯ ಅಥಿತಿಗಳ ಉಪಸ್ಥಿತಿಯಲ್ಲಿ ಫಲಾನುಭವಿಗಳಾದ ಪ್ರವೀಣ ನೆತ್ತಿಲಪದವು ಮತ್ತು ತಿಮ್ಮಪ್ಪ ಗೌಡ ಆಳ್ವರಬೆಟ್ಟು ಈ ಎರಡು ಕುಟುಂಬಗಳಿಗೆ ಸೋಲಾರ್ ಲೈಟ್ ವಿತರಿಸಲಾಯಿತು. ನಂತರ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಸೋಲಾರ್ ದೀಪ ಬೆಳಗಿಸಿ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು ಇದರ ಕೋಶಾಧಿಕಾರಿ ಪ್ರವೀಣ್ ಡಿ’ಸೋಜ ಪದಾ„ಕಾರಿಗಳಾದ ದೇವಪ್ಪ ಆಳ್ವ, ಶಿವರಾಮ ರೈ. ಎಮ್, ವಿಜಯ ರೈ ಉಪಸ್ಥಿತರಿದ್ದರು.

Exit mobile version