Site icon Ullalavani

ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕಾಗಿ ಪಿ ಎಫ್ ಐ ನಿಂದ ಅಧಿಕಾರಿಗಳೊಂದಿಗೆ ಸಮಾಲೋಚನೆ

UN NETWORKS

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ಮತ್ತು ಎನ್ ಆರ್ ತಾಲ್ಲೂಕಿನ ಬಾಳೂರು, ಜಾವಳೆ, ಮಾಗುಂಡಿ, ಬಾಳೆಹೊನ್ನೂರು, ಮಲೆಮನೆ, ಬಣಕಲ್, ಕೊಟ್ಟಿಗೆಹಾರ ಮುಂತಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ಪ್ರವಾಹದಿಂದಾಗಿ ಧ್ವಂಸಗೊಂಡಿರುವ ಮನೆ, ಮುಳುಗಡೆಯಾಗಿರುವ ಮಸೀದಿ, ದೇವಸ್ಥಾನ ಮತ್ತು ನೆರೆ ಸಂತ್ರಸ್ತರು ತಂಗಿರುವ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಿಯೋಗವು ಎಲ್ಲಾ ಸಂತ್ರಸ್ತರಿಗೆ ಸಾಂತ್ವನವನ್ನು ಹೇಳಿತು. ಅಧಿಕಾರಿಗಳೊಂದಿಗೆ ಪರಿಹಾರ ಕಾರ್ಯಚಟುವಟಿಕೆ, ಮನೆಗಳ ಪುನರ್ ನಿರ್ಮಾಣ ಜೀವ ಮತ್ತು ಬೆಳೆ ಹಾನಿ ಪರಿಹಾರದ ಬಗ್ಗೆ ಸಮಾಲೋಚನೆ ನಡೆಸಿ ಸರ್ಕಾರದ ಪರಿಹಾರಗಳು ಶೀಘ್ರವಾಗಿ ಸಂತ್ರಸ್ತರ ಕೈ ಸೇರಿಸುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಾಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಹಾಬ್, ಬಾಳೆಹೊನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹನೀಫ್, ಸಹಾಯಕ ಕಮಿಷನರ್, ತಹಶೀಲ್ದಾರರು, ಪಿಡಿಒಗಳು ಪೂರಕ ಸ್ಪಂದನೆಯನ್ನು ನೀಡಿದರು ಹಾಗೂ ಪಾಪ್ಯುಲರ್ ಫ್ರಂಟ್ ಮತ್ತು ಎಸ್ಡಿಪಿಐ ಪಕ್ಷದ ಕಾರ್ಯವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ನಂತರ ಪ್ರವಾಹದ ಸಂದರ್ಭದಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿ ಹಲವಾರು ಜನರ ಜೀವ ರಕ್ಷಿಸಿದ ಲೋಕೇಶ್ ಮಲೆ ಮನೆ ಮತ್ತು ತಂಡ, ಮಾಗುಂಡಿ ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಸಮಿತಿ, ದಾನಿಗಳಾದ ಖಾಲಿದ್, ನಾಗರಾಜ್ ಶೆಟ್ಟಿ ಮತ್ತು ಇತರರನ್ನು ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಸತೀಶ್, ಅಭಿಗೌಡ, ಜಬ್ಬಾರ್ ಮಾಗುಂಡಿ,ಮುಸ್ತಫಾ, ಇರ್ಫಾನ್ ಬಾಳೆಹೊನ್ನೂರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ನಾಯಕರಾದ ಇಕ್ಬಾಲ್ ಬಳ್ಳಮಂಜ, ಪಾಪ್ಯುಲರ್ ಫ್ರಂಟ್ ಜಿಲ್ಲಾ ನಾಯಕರಾದ ಅಝೀಝ್ ಬಣಕಲ್,ಹಸೈನಾರ್, ಆತಿಫ್, ಎಸ್ಡಿಪಿಐ ಜಿಲ್ಲಾ ನಾಯಕರಾದ ರಫೀಕ್, ಶೆರೀಫ್ ಮಹಮ್ಮದ್ ಅಲಿ ಮತ್ತು ಇತರರು ಉಪಸ್ಥಿತರಿದ್ದರು.

Exit mobile version