Site icon Ullalavani

ಯುವಪೀಳಿಗೆಗೆ ಕೃಷಿ ಜೀವನ ಪರಿಚಯ ಶ್ಲಾಘನೀಯ : ಸತೀಶ್ ಕುಂಪಲ

ಉಳ್ಳಾಲ್ ನ್ಯೂಸ್ ಡೆಸ್ಕ್

ಕೊಣಾಜೆ : ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡುವ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಒಂದು ಉತ್ತಮ ಕಾರ್ಯವಾಗಿದ್ದು, ಮುಂದಿನ ಪೀಳಿಗೆಗೆ ಕೃಷಿ ಜೀವನವನ್ನು ತಿಳಿಸಿಕೊಡುವ ಮೂಲಕ ರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.

ಅವರು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇದರ ಸೌಜನ್ಯ ಸ್ಕೌಟ್ಸ್‍ದಳ ಮತ್ತು ಗೈಡ್ಸ್ ಕಂಪೆನಿ ಇದರ ವತಿಯಿಂದ ಕೊಣಾಜೆ ಗ್ರಾಮದ ಪರಂಡೆಯ ಯು.ಬಿ.ಎಂ.ಸಿ ಶಾಲೆಯಲ್ಲಿ ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ಹಾಗೂ ವನಮಹೋತ್ಸವ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ. ಪ್ರಶಾಂತ್ ನಾಯ್ಕ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುದರ್ಶನ್ ಭಟ್, ಲಯನೆಸ್ ಕ್ಲಬ್‍ನ ಮಾಜಿ ಜಿಲ್ಲಾ ಸಂಯೋಜಕಿ ವಿಜಯಲಕ್ಷ್ಮಿ ಪಿ. ರೈ, ಉಳ್ಳಾಲ ಹಳೇಕಳ ಮದನಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಆನಂದ ಕೆ. ಅಸೈಗೋಳಿ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಸಂಚಾಲಕ ಜಯರಾಮ್ ಆಳ್ವ ಪೆÇೀಡಾರ್, ಅಂಗನವಾಡಿ ಮೇಲ್ವಿಚಾರಕಿ ಭಾರತಿ ಪಟಗಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 12 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀ ರಾಮಕೃಷ್ಣ ಅನುದಅನಿತ ಪ್ರೌಢಶಾಲೆ ಪಾವೂರು ಹರೇಕಳ ದೈಹಿಕ ಶಿಕ್ಷಕ ಹಾಗೂ ಕಾರ್ಯಕ್ರಮದ ಸಂಯೋಜಕ ತ್ಯಾಗಂ ಹರೇಕಳ ಸ್ವಾಗತಿಸಿದರು. ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಪ್ರಸ್ತಾವನೆಗೈದರು. ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾದ್ಯಮ ಶಾಲೆಯ ನೃತ್ಯ ಶಿಕ್ಷಕ ಭಾಸ್ಕರ್ ವಂದಿಸಿದರು. ದೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.

Exit mobile version