UN NETWORKS
ಉಳ್ಳಾಲ : ಗ್ರಾಮೋತ್ಸವ ಇಂಡಿಯಾ ಫೌಂಡೇಶನ್, ಶ್ರೀ ಸ್ವಾಮಿ ಮಾತೃಮಂಡಳಿ, ಹೊಲಿಗೆ ತರಬೇತಿ ಕೇಂದ್ರ ಹಾಗೂ ಸ್ತ್ರೀ ಶಕ್ತಿ ಗುಂಪು ಸೆಕೆಂಡ್ ಕೊಲ್ಯ ಇವರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಮಾತೃಮಂಡಳಿಯ ಅಧ್ಯಕ್ಷೆ ಜಾನಕಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕ ಸೇವಾ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಕುಂಪಲ ವಹಿಸಿ ಮಾತನಾಡಿ ನಮ್ಮ ತುಳುನಾಡಿನ ಸಂಸ್ಕೃತಿ ಆಚರಣೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆ ಇದನ್ನು ಸಂರಕ್ಷಿಸುವ ಕೆಲಸ ನಾವು ಮಾಡಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಗ್ರಾಮೋತ್ಸವ ಇಂಡಿಯಾ ಫೌಂಡೇಶನ್ ಕಾರ್ಯಕ್ರಮ ಸಂಯೋಜಕ ಜೀವನ್, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಗುಲಾಬಿ, ಗುಣವತಿ ಆಚಾರ್, ಸುಲೋಚನಿ ಟೀಚರ್, ಪತಂಜಲಿ ಯೋಗ ಶಿಕ್ಷಕ ಸತ್ಯೋಜಾತ ಉಪಸ್ಥಿತರಿದ್ದರು. ದಿಶಾ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ ಸ್ವಾಗತಿಸಿದರು. ಸೌಮ್ಯ ಯೋಗೀಶ್ ವಂದಿಸಿದರು.