Site icon Ullalavani

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್ ಬುಲ್‍ನ ಸಿಕ್ಸರ್ ಉದ್ಘಾಟನಾ ಸಮಾರಂಭ

UN NETWORKS

ಉಳ್ಳಾಲ : ಕೊಡ್ಲಮೊಗರು ಶ್ರೀ ವಾಣೀ ವಿಜಯ ಎ.ಯು.ಪಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್ ಬುಲ್‍ನ ಸಿಕ್ಸರ್ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ವಹಿಸಿದ್ದರು.
ಮಂಜೇಶ್ವರದ ಕ್ಷೇತ್ರ ಶಿಕ್ಷಣಾಧಿಕಾರಿ ದಿನೇಶ್ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಅನುಸೂಯ, ಎ.ಡಿ. ಗೈಡ್ ಕುಮಾರಿ, ಡಿ.ಟಿ.ಸಿ ಆಶಾ, ಆದಿನಾರಾಯಣ ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 2018ನೇ ಸಾಲಿನಲ್ಲಿ ಹೀರಕ್ ಪದಕ ಮತ್ತು ಗೋ ಏರೋ ಪರೀಕ್ಷೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸುಮಾರು 160 ಶಿಬಿರಾರ್ಥಿಗಳು 3 ಶಿಕ್ಷಕರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಸರಳ ಬಿ. ಸ್ವಾಗತಿಸಿದರು. ಜ್ಯೋತಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶಿವಪ್ರಸಾದ್ ವಂದಿಸಿದರು.

Exit mobile version