Site icon Ullalavani

ಹಬ್ಬದ ಹೆಸರಲ್ಲಿ ವಿಕೃತಿ ಸಲ್ಲ : ಅಬೂಬಕ್ಕರ್ ಮದನಿ

UN NETWORKS

ಇನೋಳಿ : ಈದುಲ್ ಅಝ್ ಹಾ ದೇವನ‌ ಪರೀಕ್ಷೆಯಲ್ಲಿ ಜಯ ಸಾಧಿಸಿದ ಪ್ರವಾದಿ ಇಬ್ರಾಹಿಂ ಮತ್ತು ಇಸ್ಮಾಯಿಲ್ ಅವರ ಸಂದೇಶ ಸಾರುವ ಪವಿತ್ರ ಹಬ್ಬವಾಗಿದ್ದು, ಈ ದಿನದಂದು ವಿಕೃತಿ ಮೆರೆಯದೆ ಹಬ್ಬದ ಪಾವಿತ್ರ್ಯ ಕಾಪಾಡಿ ಎಂದು ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ಖತೀಬ್ ಯು.ಕೆ.ಅಬೂಬಕ್ಕರ್ ಮದನಿ ಹೇಳಿದರು.

ಪಾವೂರು ಗ್ರಾಮದ ಇನೋಳಿ ಜಾಮಿಯಾ ಮುಬಾರಕ್ ಮಸೀದಿಯಲ್ಲಿ ಈದುಲ್ ಅಝ್ ಹಾದ ವಿಶೇಷ ನಮಾಝ್ ನೇತೃತ್ವ ವಹಿಸಿ ಮಾತನಾಡಿದರು. ನೀರು, ಗಾಳಿ, ಪ್ರಕೃತಿ ಎನ್ನುವುದು ದೇವನ‌ ಕೊಡುಗೆಯಾಗಿದೆ. ನಾವು ಪ್ರಕೃತಿಯನ್ನು ವಿಕೃತಿ ಮಾಡಿರುವ ಪರಿಣಾಮವಾಗಿ ಇಂದು ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಈ ಮೂಲಕ ದೇವನು ಮಾನವರಿಗೆ ಶಿಕ್ಷೆ ನೀಡುತ್ತಿದ್ದಾನೆ. ಇಂದಿನ ಸಂಕಷ್ಟದ ದಿನಗಳಲ್ಲಿ ನೆರೆ ಪೀಡಿತರನ್ನೂ ಮನದಲ್ಲಿಟ್ಟುಕೊಂಡು ಅವರಿಗೆ ಸಹಾಯಹಸ್ತ ಚಾಚುವ ಮೂಲಕ ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಬೇಕಾಗಿದೆ ಎಂದು ತಿಳಿಸಿದರು.

Exit mobile version