UN NETWORKS
ಉಳ್ಳಾಲ : ನೆರೆಪೀಡಿತ ಉತ್ತರಕನ್ನಡ ಜಿಲ್ಲೆಗಳಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಯ ವೈದ್ಯಕೀಯ ತಂಡವು ನೆರೆ ಸಂತ್ರಸ್ತರಿಗಾಗಿ ಉಚಿತವಾದ ಶಿಬಿರವನ್ನು ಕಾರವಾರದ ಪ್ರಮುಖ 5 ಗಂಜಿಕೇಂದ್ರಗಳಲ್ಲಿ ನಡೆಸುತ್ತಿದ್ದಾರೆ.
ಕೆ.ಎಸ್ ಹೆಗ್ಡೆಯ ಆಸ್ಪತ್ರೆ ಯ ತೀವ್ರ ನಿಗಾ ಘಟಕದ ಮುಖ್ಯಧಿಕಾರಿಯಾಗಿರುವ ಡಾ. ನರೇಶ್ ಶೆಣೈ ಹಾಗೂ ವೈದ್ಯಕೀಯ ಅಧಿಕಾರಿ ಡಾ. ಸುದೇಶ್ ಶೆಟ್ಟಿ ಇವರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿಗಳನ್ನು ವಿತರಿಸಲಾಯಿತು.ಪ್ರವಾಹ ಅಥವಾ ನೆರೆ ಬಂದಂತಹ ಸಂದರ್ಭದಲ್ಲಿ ಮನುಷ್ಯನ ಆರೋಗ್ಯದಲ್ಲಿ ವ್ಯತ್ಯಾಸ ಗಳಾಗುತ್ತದೆ. ನಿರಾಶ್ರಿತರಾಗಿರುವವರಿಗೆ ಮಾಸಿಕ ಧೈರ್ಯ ದ ಜೊತೆಗೆ ದೇಹದ ಆರೋಗ್ಯವು ಬೇಕಾಗುತ್ತದೆ. ಎಳೆ ಕಂದಮ್ಮಗಳು, ಮಕ್ಕಳು ಹಾಗೂ ವಯಸ್ಸಾದವರಿಗೆ ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಉಚಿತ ತಪಾಸಣೆಯನ್ನು ನಡೆಸಿದ ಆಸ್ಪತ್ರೆಯ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ಶಿಬಿರಲ್ಲಿ ಆರೋಗ್ಯ ತಪಾಸಣೆ, ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು, ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಉಚಿತ ಔಷಧಿಗಳನ್ನು ಶಿಬಿರದಲ್ಲಿ ನೀಡಲಾಯಿತು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ಗೆ ಕಾರವಾರ, ಸರಕಾರಿ ಹಿರಿಯ ಪ್ರಾ. ಶಾಲೆ ಸಿದ್ದರ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಿದ್ದರ, ಕ.ವಿ.ನಿ.ನಿ ಹಿರಿಯ ಪ್ರಾಥಮಿಕ ಶಾಲೆ ಕದ್ರಾ ಎಂಬ ಸುಮಾರು 5 ಗಂಜಿಕೇಂದ್ರಗಳಲ್ಲಿ ನಡೆದ ಈ ಶಿಬಿರಲ್ಲಿ ಸುಮಾರು 200ಕ್ಕೂ ಅಧಿಕ ಮಂದಿಯ ತಪಾಸಣೆ ನಡೆಸಲಾಯಿತು.
ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಹತ್ತು ನುರಿತ ವೈದ್ಯರು, ಇಬ್ಬರು ಪ್ಯಾರಮೆಡಿಕಲ್ ವಿಭಾಗದವರು ಹಾಗೂ ಇಬ್ಬರು ಮಾರ್ಕೆಂಟಿಗ್ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.