Site icon Ullalavani

ಉಳ್ಳಾಲ : ಸೈಯ್ಯದ್ ಮದನಿ ದರ್ಗಾದಲ್ಲಿ ಬಕ್ರೀದ್ ಹಬ್ಬ ಆಚರಣೆ

UN NETWORKS

ಉಳ್ಳಾಲ : ತ್ಯಾಗ ಬಲಿದಾನದ ಸಂಕೇತವಾಗಿರುವ ಈದುಲ್ ಅಝ್‍ಆ ಹಬ್ಬವನ್ನು ಪರಸ್ಪರ ಅರ್ಥ ಮಾಡಿಕೊಂಡು ಆಚರಿಸಬೇಕಾಗಿದೆ. ಜಾತಿ, ಧರ್ಮ ಇಲ್ಲದೇ ಪ್ರೀತಿ, ಸ್ನೇಹದಿಂದ ಎಲ್ಲ ವರ್ಗ ಸೇರಿ ಹಬ್ಬದ ಮಹತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಈದುಲ್ ಅಝಾ ಹಬ್ಬದ ಪ್ರಯುಕ್ತ ಉಳ್ಳಾಲ ಸಯ್ಯದ್ ಮದನಿ ದರ್ಗಾ ಭೇಟಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ಅವರು ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ ಹಬ್ಬಗಳಿರುವುದು ಮನೋರಂಜನೆಗಾಗಿ ಅಲ್ಲ. ಈದುಲ್ ಅಝಾ ತ್ಯಾಗ ಬಲಿದಾನದ ಹಬ್ಬವಾಗಿದ್ದು ಸೌಹಾರ್ದತೆಯಿಂದ ಆಚರಿಸಬೇಕಾಗಿದೆ.ಒಗ್ಗಟ್ಟು ಪ್ರದರ್ಶಿಸಿ ದೇಶ ಅಭಿವೃದ್ಧಿಯ ಕೆಲಸ ನಮ್ಮಿಂದ ಆಗಬೇಕು ಎಂದರು.
ಖತೀಬ ಅಬ್ದುಲ್ ಅಝೀಝ್ ಬಾಖವಿ ಈದ್ ಖುತ್ಬಾ ಮತ್ತು ನಮಾಝ್ ನಿರ್ವಹಿಸಿದರು.

ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಕೋಶಾ„ಕಾರಿ ಯು.ಕೆ ಇಲ್ಯಾಸ್, ಆಡಿಟರ್ ಯು.ಟಿ. ಇಲ್ಯಾಸ್, ಜೊತೆ ಕಾರ್ಯದರ್ಶಿ ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಅರೆಬಿಕ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಸದಸ್ಯರುಗಳಾದ ಫಾರೂಕ್ ಉಳ್ಳಾಲ, ಮುಸ್ತಫಾ ಮಂಚಿಲ, ಅಯ್ಯೂಬ್ ಮಂಚಿಲ, ಮಹಮ್ಮದ್ ಅಳೇಕಲ, ಮೊಯ್ದಿನಬ್ಬ ಅಝಾದ್ ನಗರ, ಅಬೂಬಕರ್ ಅಲಿ ನಗರ, ಹಮೀದ್ ಯು.ಪಿ. ಅಳೇಕಲ, ಇಬ್ರಾಹಿಂ ಹಾಜಿ ಉಳ್ಳಾಲಬೈಲ್, ಹಮೀದ್ ಕೋಡಿ, ಯೂಸುಫ್, ಅದ್ದಾಮ ಮೇಲಂಗಡಿ, ಮಾಜಿ ಸದಸ್ಯರುಗಳಾದ ಕಬೀರ್ ಚಾಯಬ್ಬ, ಆದಂ ಹಾಜಿ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು.

Exit mobile version