Site icon Ullalavani

ಉಳ್ಳಾಲ ನಗರ ಸಭಾ ಕೌನ್ಸಿಲರ್ ಗೆ ಹಲ್ಲೆ , ಎಸ್.ಡಿ.ಪಿ.ಐ. ಖಂಡನೆ

UN NETWORKS

ಉಳ್ಳಾಲ : ಉಳ್ಳಾಲ ನಗರಸಭೆಯ ಕಲ್ಲಾಪು ವಾರ್ಡಿನ ಪಕ್ಷೇತರ ಕೌನ್ಸಿಲರ್ ಮುಸ್ತಾಕ್ ಪಟ್ಲರವರಿಗೆ ದೈಹಿಕ ಹಲ್ಲೆ ನಡೆದಿರುವುದಕ್ಕೆ ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿ ಮತ್ತು ಪಕ್ಷದ ಆರು ಕೌನ್ಸಿಲರ್ ಗಳು ಖಂಡಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಸ್ತಾಕ್ ಪಟ್ಲರವರನ್ನು ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ,ಎಸ್.ಡಿ.ಪಿ.ಐ.ಕೌನ್ಸಿಲರ್ ರಮೀಝ್ ಕೋಡಿ ಬೇಟಿ ನೀಡಿದರು. ನೆರೆ ಪರಿಹಾರ ರಕ್ಷಣಾ ಕಾರ್ಯದಲ್ಲಿ ನಿರತರಾದ ಮುಸ್ತಾಕ್ ಪಟ್ಲರವರಿಗೆ ರಾಜಕೀಯ ವಿರೋಧಿಗಳ ಕುಮ್ಮಕ್ಕು ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೋಲಿಸ್ ಇಲಾಖೆ ಹಲ್ಲೆ ನಡೆಸಿದವರನ್ನು ಮತ್ತು ಅವರ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಲು ಮತ್ತು ಬಂಧಿಸಲು ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿಯು ಆಗ್ರಹಿಸಿದೆ.‌

Exit mobile version