UN NETWORKS
ಕೊಣಾಜೆ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ
ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಿಪ್ಪಾಡಿ ಸೈಟ್‍ನಲ್ಲಿಯ ಮಾರ್ಟಿನ್ ಪೆರಾವೋ ಎಂಬವರ ಮನೆಗೆ ಬುಧವಾರ ಸುರಿದ ಭಾರೀ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.
ಕೊಣಾಜೆ ನಡುಪದವು ಕಲ್ಲುಗುಂಡಿಯ ಖಾದರ್ ಹಾಜಿ ಎಂಬವರ ಮನೆ ಬಳಿಯ ಮರವೊಂದು ವಿದ್ಯುತ್ ತಂತಿಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಧರೆಗುರಳಿದೆ. ಅಲ್ಲದೆ ಇಲ್ಲಿಯೇ ಸಮೀಪದ ಸುಧಾಕರ್ ಎಂಬವರ ಮನೆ ಸಮೀಪದ ಹಲಸಿನ ಮರವೊಂದು ಬುಧವಾರ ರಾತ್ರಿ ಗಾಳಿಗೆ ಮುರಿದು ಬಿದ್ದಿದೆ.
ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದ ಮುಂಭಾಗದ ಆವರಣ ಗೋಡೆಯು ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕೊಣಾಜೆ ದೊಡ್ಡುಗುಳಿಯ ಗೋಪಾಲ್ ಎಂಬವರ ಮನೆ ಸಮೀಪದ ಗುಡ್ಡದ ಮಣ್ಣು ಕುಸಿದು ಮನೆಗೆ ಹಾನಿ ಸಂಭವಿಸಿದೆ.