Site icon Ullalavani

370 ಮತ್ತು 35 A ಕಾಯ್ದೆ ರದ್ದು ತೊಕ್ಕೊಟಿನಲ್ಲಿ ಬಿ.ಜೆ.ಪಿ.ಯಿಂದ ಹರ್ಷಾಚರಣೆ

UN NETWORKS

ತೊಕ್ಕೊಟ್ಟು : ಕಾಂಗ್ರೆಸ್ ಅಧಿಕಾರದ ಸುಖ ಅನುಭವಿಸಲು ಮತ ಬ್ಯಾಂಕ್ ಸೃಷ್ಟಿಗಾಗಿ ಮಾಡಿರುವ ದುರಂತಮಯ ಕಾಯ್ದೆಗಳನ್ನು ರದ್ದುಗೊಳಿಸಿ ಸಬ್ ಕಾ ಸಾಥ್ ಸಬ್ ವಿಕಾಸ್ ದೋರಣೆಯೊಂದಿಗೆ ಹೆಜ್ಜೆ ಇಡುತ್ತಿರುವ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರಕಾರ ಜಮ್ಮು ಕಾಶ್ಮೀರ ಕ್ಕೆ ನೀಡಿರುವ ವಿಶೇಷ ಸ್ಥಾನಮಾನ 370 ಮತ್ತು 35 A ಕಾಯ್ಧೆಯನ್ನು ರದ್ದುಗೊಳಿಸಿದ ಐತಿಹಾಸಿಕ ತೀರ್ಮಾನವನ್ನು ಅಭಿನಂದಿಸಿ ಮಂಗಳೂರು ಕ್ಷೇತ್ರ ಬಿ.ಜೆ.ಪಿ.ಯಿಂದ ತೊಕ್ಕೊಟಿನಲ್ಲಿ ಸಿಹಿ ತಿಂಡಿ ನೀಡಿ ಹರ್ಷಾಚರಣೆಗೈಯಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ ಉಚ್ಚಿಲ್, ಹಿರಿಯರಾದ ಸಂಜೀವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಮಾತನಾಡಿದರು. ಕ್ಷೇತ್ರದ ಉಪಾಧ್ಯಕ್ಷ ರಾದ ಹರಿಯಪ್ಪ ಸಾಲ್ಯಾನ್, ಪ್ರಕಾಶ್ ಸಿಂಫೋನಿ, ಮಹಿಳಾ ಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಮಾಧ್ಯಮ ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೊಟು, ಪ್ರಮುಖರಾದ ಚಂದ್ರಹಾಸ ಪಂಡಿತ್ ಹೌಸ್, ಪ್ರಶಾಂತ್ ಕಾಪಿಕಾಡ್, ಅಜಂತ್ ಪಿಲಾರ್, ಭಾರತಿ ಗಟ್ಟಿ, ಭಗವಾನ್ ದಾಸ್, ದಯಾನಂದ ತೊಕ್ಕೊಟು, ಪುರುಷೊತ್ತಮ ಕಲ್ಲಾಪು, ಸುರೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ರಾಜೇಶ್ , ಅಜಿತ್ ಉಳ್ಳಾಲ್, ನಾರಾಯಣ ಬಿ. ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಮನೋಜ್ ಆಚಾರ್ಯ ಧನ್ಯವಾದ ನೀಡಿದರು.

Exit mobile version