UN NETWORKS
ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಮೂರನೇ ವಾರ್ಷಿಕೋತ್ಸವ ಹಾಗೂ ಬ್ಲಡ್ ಡೊನೇಷನ್ ಎಕ್ಸ್ಪೋ2019ನ ಉದ್ಘಾಟನಾ ಸಮಾರಂಭ ನಗರ ಫಿಝಾ ಮಾಲ್ ನಡೆಯಿತು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ, ಮಿಲಾಗ್ರಿಸ್ ಚರ್ಚ್ ನ ಧರ್ಮಗುರು ಫಾ.ಅನಿಲ್ ಫ್ರಾನ್ಸಿಸ್ ಪಿಂಟೋ ಹಾಗೂ ಪೊಳಲಿ ರಾಮಕೃಷ್ಣ ತಪೋವನದ ವಿವೇಕ್ ಚೈತನ್ಯಾನಂದ
ಸ್ವಾಮಿ ಮೂರು ಧರ್ಮಗುರುಗಳು ಜೊತೆ ಸೇರಿ ಕಾರ್ಯಕ್ರಮ ಉದ್ಘಾಟಿಸಿದರು.ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಪ್ರಾಧ್ಯಾಪಕ ಅನೀಸ್ ಕೌಸರಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ. ಶರತ್ ಕುಮಾರ್ ರಾವ್.ಜಿ, ತೇಜಸ್ವಿನಿ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಶಿಲ್ಪ ಪ್ರೇಮ್ ಕುಮಾರ್, ಶ್ರೀನಿವಾಸ್ ಅಸ್ಪತ್ರೆಯ ಡಾ.ಸುಕೇಶ್ ಕೊಟ್ಟಾರಿ, ಕಚಚೂರು ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ವೆಂಕಟೆಸ್ ರಾಜ್ ರೈ, ರೆಡ್ ಕ್ರಾಸ್ ಸೊಸೈಟಿಯ ಪ್ರವಿಣ್ ಕುಮಾರ್, ಎ.ಜೆ ಅಸ್ಪತ್ರೆಯ ಪಿ.ಆರ್ ಗೋಪಾಲಕೃಷ್ಣ ರಕ್ತದಾನ ಕುರಿತು ಮಾಹಿತಿ ನೀಡಿದರು. ಯೇನೆಪೋಯ ಅಸ್ಪತ್ರೆಯ ಶಿಬಿರ ಸಂಯೋಜಕ ಅಬ್ದುಲ್ ರಝಾಕ್, ಸಾಮಾಜಿಕ ಕಾರ್ಯಕರ್ತ ಮುನೀರ್ ಬಾವ ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭ ಸಾರ್ವಜನಿಕರಿಗೆ ರಕ್ತ ಮತ್ತು ಆರೋಗ್ಯ ಎಂಬ ವಿಷಯದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ತನ್ಸಿಫ್ ಬಿ.ಎಂ ಕಿಲ್ಲೂರು ಅವರು ರಸಪ್ರಶ್ನೆ ಸ್ಪರ್ಧೆ ಅಯೋಜಿಸಲಾಗಿತು.
ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವ ವನ್ನು ಸಾರುವ ನೌಷಾದ್ ಕ್ಲಾಸಿಕ್ ನಿರ್ದೇಶನದ “ಬದಲಾವಣೆ ನಮ್ಮಿಂದಲೇ” ಕಿರುಚಿತ್ರ ಬಿಡುಗಡೆ ಹಾಗೂ ಪ್ರದರ್ಶನ ಕಾರ್ಯಕ್ರಮ ನಡೆಯಿತು. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಬದಲಾವಣೆ ನಮ್ಮಿಂದಲೇ” ಕಿರುಚಿತ್ರ ಬಿಡುಗಡೆಗೊಳಿಸಿದರು. ,ನವರಸ ರಾಜೆ ಭೋಜರಾಜ್ ವಾಮಂಜೂರು, ಕೋಸ್ಟಲ್ ವುಡ್ ನಿರ್ಮಾಪಕರಾದ ಕಿಶೋರ್ ಡಿ.ಶೆಟ್ಟಿ, ರಾಜೇಶ್ ಕುಡ್ಲ ಮುಂತಾದ ಹಲವು ಚಿತ್ರರಂಗದ ದ್ವೀಗಜರು ಕಿರು ಚಿತ್ರ ವಿಕ್ಷೀಸಿ ಪ್ರಶಂಸೆ ವ್ಯಕ್ತ ಪಡಿಸಿದಿದರು.
ಬಾಲ ಪ್ರತಿಭೆಗಳಾದ ವಂಶಿ ರತ್ನಕುಮಾರ್, ಮೊಹಮ್ಮದ್ ಶಯಾನ್ ವಾಮಂಜೂರು, ಸಾನ್ವಿತ್ ಕುಲಾಲ್ ಮೂಡಬಿದ್ರೆ ರವರನ್ನು ಸನ್ಮಾನಿಸಲಾಯಿತು.ವಾರ್ಷಿಕೊತ್ಸವದ ಪ್ರಯುಕ್ತ ಪುಟಾಣಿಗಳಿಗೆ ಕಾರ್ಯಗಾರ, ಚಿತ್ರಕಲಾ ಸ್ಪರ್ಧೆ, ಸಾರ್ವಜನಿಕರಿಗೆ ರಕ್ತ ದಾನ ಅದರ ಮಹತ್ವ ಬಗ್ಗೆ ಮಾಹಿತಿ ನಿಡಲಾಯಿತು.ಶಿಬಿರದಲ್ಲಿ 35 ಯುನಿಟ್ ರಕ್ತ ಸಂಗ್ರಹಿಸಲಾಯಿತು.