UN NETWORKS
ಉಳ್ಳಾಲ : ಉಳ್ಳಾಲ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಸಕ್ರೀಯ ಸದಸ್ಯ ಮತ್ತು ಉಳ್ಳಾಲ ಮಲರಾಯ ಸ್ಥಾನದ ನೂತನವಾಗಿ ಅರ್ಚಕರಾಗಿ ಆಯ್ಕೆಯಾದ ಲತೀಶ್ ಪೂಜಾರಿಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಯಲ್ಲಿ ನಡೆಯಿತು.
ಅಧ್ಯಕ್ಷರಾದ ಚಂದ್ರಹಾಸ ಶ್ರೀಯಾನ್, ನವೀನ್ ಚಂದ್ರ ಉಳ್ಳಾಲಬೈಲ್, ಗೌರವ ಅಧ್ಯಕ್ಷ ರವೀಂದ್ರ ರಾಜ್ ಉಳ್ಳಾಲ್, ಮಾಜಿ ಅಧ್ಯಕ್ಷ ಕಾಂಚನ್ ಕೆ. ಉಳ್ಳಾಲಬೈಲ್, ಕಾರ್ಯದರ್ಶಿ ದಿನೇಶ್ ಉಳ್ಳಾಲ್, ಸದಸ್ಯರಾದ ಜಗದೀಶ್ ಗೋಳಿಯಡಿ, ವ್ಯಾಯಾಮ ಶಾಲೆಯ ಉಸ್ತಾದ್ ಲಿಂಗಪ್ಪ ಮಾಸ್ಟರ್ ಉಳ್ಳಾಲ ನಗರ ಸಭೆ ಸದಸ್ಯರಾದ ರೇಶ್ಮಾ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.