Site icon Ullalavani

ಕುಂಪಲ : ಆಟಿದ ಕೂಟ-2019

UN NETWORKS

ಕುಂಪಲ : ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಮತ್ತು ಕೇಸರಿ ಮಾತೃ ಮಂಡಳಿ, ವ್ಯಾಸನಗರ ಕುಂಪಲ ಇದರ ವತಿಯಿಂದ ಆಟಿದ ಕೂಟ-2019 ಕಾರ್ಯಕ್ರಮ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ಜಯರಾಮ ಶೆಟ್ಟಿ , ನ್ಯಾಯವಾದಿ ಕಿರಣ್ ಮಹೇಶ್ ಉದ್ಘಾಟಿಸಿದರು. ನಿವೃತ್ತ ಸೇನಾನಿಗಳಾದ ಕ್ಯಾಪ್ಟನ್ ಜಿ. ಎಸ್. ಪ್ರಸಾದ್, ವೆಂಕಟೇಶ್ ಕುಂಪಲ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಬಾಲಸಂರಕ್ಷಣಾ ಕೇಂದ್ರದ ವಿದ್ಯಾರ್ಥಿಗಳಿಗೆ ಸಂದೀಪ್ ಕುಂಪಲ ತೆಲಿಕೆ ನಲಿಕೆದ ಆಟಗಳನ್ನು ಆಡಿಸಿದರು ಮತ್ತು ಬಹುಮಾನಗಳನ್ನು ನೀಡಲಾಯಿತು. ಕೇಸರಿ ಮಾತೃ ಮಂಡಳಿಯ ಸಂಜನಾ ಡೆನ್ನಾನ ಡೆನ್ನಾನ ತುಳುನಾಡ ಸಿರಿ, ಬಾಲ ಸಂರಕ್ಷಣಾ ಕೇಂದ್ರದ ದೀಪ ಮತ್ತು ಸಂಗಡಿಗರಿಂದ ಆಟಿ ಕಳೆಂಜೆ ನೃತ್ಯ ಪ್ರದರ್ಶನ ನಡೆಯಿತು.

ಅಕ್ಷತಾ ಮತ್ತು ಸ್ವಾತಿ ತುಳು ಪದ್ಯವನ್ನು ಹಾಡಿದರು.. ಹರಿಣಾಕ್ಷಿ ರವರು ಪಾಡ್ದವನ್ನು ಹಾಡಿದರು.. ಅನುಷಾ ಭಗವದ್ಗೀತೆ ಕಂಠ ಪಾಟದ ತುಣುಕೊಂದನ್ನು ವಾಚಿಸಿದರು. ನಂತರ ತುಳುನಾಡ ಲಿಟಲ್ ಸ್ಟಾರ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮಾಸ್ಟರ್ ತಕ್ಷಿಲ್ ಎಮ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ತಕ್ಷಿಲ್ ರವರು ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಅಧ್ಯಕ್ಷ ರಾಕೇಶ್ ಪಿ. ಸ್ವಾಗತಿಸಿದರು. ಭಗವಾನ್ ದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ವೃಂದದ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಗೆ ತಿಳಿಸಿದರು. ಕುತ್ತಾರ್ ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕ ಅನಂತ ಕೃಷ್ಣ ಭಟ್, ಮಾಜಿ ಶಾಸಕ ಜಯರಾಮ ಶೆಟ್ಟಿ,, ಕಾರ್ಯಕ್ರಮಕ್ಕೆ ಮತ್ತು ವೃಂದದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ವತಿಯಿಂದ ರೂ 5000/- ದ ಧನ ಸಹಾಯಯವನ್ನು ವೇದಿಕೆಯಲ್ಲಿ ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕರಿಗೆ ಹಸ್ತಾಂತರಿಸಲಾಯಿತು.ಉಮೇಶ್ ಕುಂಪಲ ವಂದಿಸಿದರು. ಸಂದೀಪ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾತೃ ಮಂಡಳಿಯ ಸದಸ್ಯರೇ ತಯಾರಿಸಿದ ಆಟಿ ತಿಂಗಳ ವಿಶೇಷ ತಿಂಡಿತಿನಿಸುಗಳನ್ನು ಬಾಲ ಸಂರಕ್ಷಣಾ ಕೇಂದ್ರ ಮಕ್ಕಳಿಗೆ, ಹಾಗೂ ಅತಿಥಿಗಳಿಗೆ ಬಡಿಸಲಾಯಿತು.

Exit mobile version