Site icon Ullalavani

ವಿವಿ ಕನ್ನಡ ಅಧ್ಯಯನ ಸಂಸ್ಥೆಗೆ ಏರ್ಯ ಅವರ ಕೊಡುಗೆ ಅಪಾರ: ಪ್ರೊ.ಅಭಯಕುಮಾರ್

UN NETWORKS

ಕೊಣಾಜೆ : ಸಂಸ್ಕೃತಿ ಚಿಂತಕ, ಸಾಹಿತ್ಯ ಪರಿಚಾರಕ ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮಂಗಳೂರು ವಿವಿ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಅಭಯಕುಮಾರ್ ಅವರು ಹೇಳಿದರು.

ಅವರು ಸೋಮವಾರ ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದಲ್ಲಿ ಸಾಹಿತಿ ಏರ್ಯ ಲಕ್ಷ್ಷೀ ನಾರಾಯಣ ಆಳ್ವ ಅವರ ನಿಧನದ ಹಿನ್ನೆಲಯಲ್ಲಿ ನಡೆದ ಸಂತಾಪ ಸೂಚನೆ ಸಭೆಯಲ್ಲಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ತುಳು ಅಧ್ಯಯನ ಪೀಠ ಆರಂಭವಾದಾಗಿನಿಂದ ಹಿಡಿದು ಇಂದಿನ ವರೆಗೂ ಸಲಹಾ ಸಮಿತಿಯ ಸದಸ್ಯರಾಗಿದ್ದುಕೊಂಡು ತುಳು ಮತ್ತು ಕನ್ನಡ ಭಾಷೆಯ ಅನುಸಂಧಾನದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಶೆಟ್ಟಿ ಅವರು ಮಾತನಾಡಿ, ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಏರ್ಯ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ.ರಾಜಶ್ರೀ, ರಾಜೇಶ್ ನಾಯಕ್ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version