UN NETWORKS
ಕುಂಪಲ : ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಮಂಗಳೂರು, ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಮತ್ತು ಯುವ ಮರಾಠ ಕುಂಪಲ ಇದರ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ತಡೆಗಟ್ಟಲು ಮುನ್ನೆಚ್ಚರಿಕಾ ಕಾರ್ಯಕ್ರಮ ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ನಡೆಯಿತು.
ಮಾಹಿತಿ ಕಾರ್ಯಾಗಾರವನ್ನು ಆರೋಗ್ಯ ಇಲಾಖೆಯ ಆರ್.ಸಿ.ಹೆಚ್, ರಾಜೇಶ್ ನಡೆಸಿಕೊಟ್ಟರು. ಅದ್ಯಕ್ಷತೆಯನ್ನು ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ವಹಿಸಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಸಂಪರ್ಕಾಧಿಕಾರಿ ರಘುವೀರ್ ಎಸ್, ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಗೌರವಾದ್ಯಕ್ಷ ಸೋಮಶೇಖರ ಕೆ. ಜಗತಾಪ್, ಯುವ ಮರಾಠದ ಗೌರವಾದ್ಯಕ್ಷ ವೆಂಕಟಗಿರಿ, ಬಾಲಕೃಷ್ಣ ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾಧಿಕಾರಿ ಮಾಧವ ಬಂಗೇರ, ನೆಹರೂ ಯುವ ಕೇಂದ್ರದ ವಿಕಾಸ್ ರಾವ್ ಕುಂಪಲ, ಪ್ರಜ್ವಲ್ ಹಾಗೂ ಯುವ ಮರಾಠ ಮತ್ತು ಬಾಲಕೃಷ್ಣ ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ಸ್ವಾಗತಿಸಿದರು, ಕೃಷ್ಣ ಪೊನ್ನತ್ತೋಡು ನಿರೂಪಿಸಿ, ಗೋಪಾಲ ಕೃಷ್ಣರಾವ್ ವಂದಿಸಿದರು.