UN NETWORKS
ದೇರಳಕಟ್ಟೆ : ರೋಟರಿ ಕ್ಲಬ್ ದೇರಳಕಟ್ಟೆಯ ವತಿಯಿಂದ “ಆಟಿದ ಕೂಟ” ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರವೀಂದ್ರ ಕಲಾ ವೇದಿಕೆಯಲ್ಲಿ ನಡೆಯಿತು.
ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ರೈ ಮತ್ತು ಪೊಸಕುರಲ್ ಟಿ ವಿ ಚಾನೆಲ್ ನ ನಿರ್ದೇಶಕ ವಿದ್ಯಾಧರ ಶೆಟ್ಟಿ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಿದರು. ದೇರಳಕಟ್ಟೆ ರೋಟರಿ ಕ್ಲಬ್‍ನ ಅಧ್ಯಕ್ಷ ಪ್ರೊ| ರವಿಶಂಕರ್ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಡಾಟ ದೇವದಾಸ್ ರೈ ಮುಖ್ಯ ಅತಿಥಿಯಾಗಿದ್ದರು. ಕ್ಲಬ್‍ನ ಕಾರ್ಯದರ್ಶಿ ವಿಕ್ರಂ ದತ್ತಾ, ನಿಕಟ ಪೂರ್ವ ಅಧ್ಯಕ್ಷರಾದ ಪುರುಷೋತ್ತಮ್ ಅಂಚನ್, ಕೋಶಾಧಿಕಾರಿ ಜೆ. ಪಿ. ರೈ ಉಪಸ್ಥಿತರಿದ್ದರು. ಕ್ಲಬ್‍ನ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ನಿರ್ದೇಶಕರಾದ ಡಾ| ಅನಂತನ್ ವಂದಿಸಿದರು.