Site icon Ullalavani

ಮಂಗಳೂರು : ಸಿದ್ಧಾರ್ಥ ಮೃತದೇಹ ಪತ್ತೆ

UN NETWORKS

ಮಂಗಳೂರು: ಸೋಮವಾರ ರಾತ್ರಿ ಮಂಗಳೂರು ತೊಕ್ಕೊಟ್ಟು ನೇತ್ರಾವತಿ ನದಿ ಸೇತುವೆ ಸಮೀಪ ಕಾಣೆಯಾಗಿದ್ದ ಕೆಫೆ ಕಾಫಿ ಡೇ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಮೃತದೇಹ ಬುಧವಾರ ಬೆಳಗ್ಗೆ 6.30ಕ್ಕೆ ಹೊಯ್ಗೆ ಬಝಾರ್ ಅಳಿವೆ (ನದಿ ಮತ್ತು ಸಮುದ್ರ ಸೇರುವ ಸ್ಥಳ) ಬಾಗಿಲ ಸಮೀಪ ಪತ್ತೆಯಾಗಿದೆ.

ಕಾರು ಚಾಲಕನಲ್ಲಿ ಸೇತುವೆ ಬಳಿ ಕಾರು ನಿಲ್ಲಿಸುವಂತೆ ಹೇಳಿದ್ದ ಸಿದ್ಧಾರ್ಥ ಅವರು ಆ ಬಳಿಕ ಸೇತುವೆಯಲ್ಲಿ ನಡೆದುಕೊಂಡು ಮೊಬೈಲ್ ‌ನಲ್ಲಿ ಮಾತನಾಡುತ್ತಾ ತೆರಳಿದ್ದಾರೆ. ಬಳಿಕ ಸೇತುವೆ ಮಧ್ಯಭಾಗಕ್ಕೆ ಬಂದು ನಂತರ ಕಾಣೆಯಾಗಿದ್ದಾರೆ ಎಂದು ಈ ಬಗ್ಗೆ ಮಂಗಳೂರು ಪೊಲೀಸರಿಗೆ ಕಾರು ಚಾಲಕ ದೂರು ನೀಡಿದ್ದರು.

Exit mobile version