Site icon Ullalavani

ಪರಿಜ್ಞಾನ ಕಾಲೇಜು: ಕಾರ್ಗಿಲ್ ವಿಜಯ ದಿನ

UN NETWORKS

ಉಳ್ಳಾಲ : ಪರಿಜ್ಞಾನ ಪದವಿ ಪೂರ್ವ ಕಾಲೇಜು ಸೋಮೇಶ್ವರದಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.

ನಿವೃತ್ತ ಸೇನಾನಿ ವೆಂಕಟೇಶ್ ಕುಂಪಲ ಕಾರ್ಗಿಲ್ ಯುದ್ಧ ಹಾಗೂ ಅದರಲ್ಲಿ ಬಲಿದಾನಗೈದ ವೀರ ಯೋಧರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಾರಸ್ವತ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಮಹೇಶ್ ಎಲ್ ಬೊಂಡಾಲ್, ಆನಂದಾಶ್ರಮ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ್, ಕಾರ್ಯದರ್ಶಿ ಚಂದ್ರಶೇಖರ್ ಉಚ್ಚಿಲ್, ಪ್ರಾಂಶುಪಾಲ ವಿಕ್ರಮ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Exit mobile version