UN NETWORKS
ಕಿನ್ಯ: ರಾಮಾಯಣ ಮಸಾಚರಣೆಯ ಉದ್ಘಾಟನೆಯು ಕಿನ್ಯದ ಗುತ್ತಿನ ಮನೆಯಲ್ಲಿ ಮಲರಾಯ ಚಾವಡಿಯಲ್ಲಿ ಸಂಕ್ರಾಂತಿ ಆಚರಣೆಯೊಂದಿಗೆ ಪ್ರಾರಂಭವಾಯಿತು.
ಹರಿಕಥೆ ಸಂತ್ಸಾಂಗವನ್ನು ರಾಮಾಯಣ ಮಾಸಾಚರಣೆಯ ಅಧ್ಯಕ್ಷ ಮಧುಸೂದನ್ ಅಯ್ಯಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಾರಾಯಣ ಶೆಟ್ಟಿ ಯಜಮಾನ ಕಿನ್ಯಗುತ್ತು, ಶಿವರಾಮ ಶೆಟ್ಟಿ ಸಾಂತ್ಯಗುತ್ತು, ದೇವಿಪುರ ಮಹಾದೇವ ಭಜನಾ ಮಂದಿರದ ಅಧ್ಯಕ್ಷ ನವೀನ್ ಆಳ್ವ, ಪ್ರಭಾಕರ್ ಶೆಟ್ಟಿ ಕಿನ್ಯಗುತ್ತು ಅಳಿಕೆ ಉಪಸ್ಥಿತರಿದ್ದರು.
ಕೀರ್ತನಾ ಪ್ರವೀಣಾ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪುತ್ರಕಾಮೆಷ್ಠೆ ಯಾಗದ ವಿಷಯದಲ್ಲಿ ಹರಿಕತೆ ನಡೆಸಿದರು.
ಹಿಮ್ಮೇಳದಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು, ಕೌಶಿಕ್ ಮಂಜನಾಡಿ, ಸಂಯೋಜಕ ಪದ್ಮನಾಭ, ನಾರಾಯಣ ಕಜೆ, ಮಹಾಬಲ ಪೂಂಜ, ಮಂಜನಾಡಿ ಸದಾಶಿವ ಆಚಾರ್ಯ, ಹಾಗೂ ಕಿನ್ಯ ಗುತ್ತಿನ ಕುಟುಂಬಸ್ಥರು ಭಾಗವಹಿಸಿದ್ದರು. ಟಿ. ಮೋನಪ್ಪ ಶೆಟ್ಟಿ ಸ್ವಾಗತಿಸಿದರು.