Site icon Ullalavani

ತಲಪಾಡಿ: ಶಾರದಾ ವಿದ್ಯಾನಿಕೇತನದಲ್ಲಿ ಕಾರ್ಗಿಕ್ ವಿಜಯ ದಿನ

UN NETWORKS

ತಲಪಾಡಿ : ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯದ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ 30 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕ ಮೇಜರ್ ದಾಮೋದರ ಸುವರ್ಣ ಮಕ್ಕಳನ್ನು ಉದ್ದೇಶಿಸಿ ಕಾರ್ಗಿಲ್ ಯುದ್ಧಕ್ಕೆ ಕಾರಣ, ಸೈನಿಕರ ಸಾಹಸ, ಯುದ್ಧ ನಡೆದ ಸ್ಥಳದ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡಿದರು. ಸೈನಿಕರ ಕುಟುಂಬದ ಒಳಿತನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಕಾರ್ಗಿಲ್ ವಿಜಯವನ್ನು ದೇಶಭಕ್ತಿ ಗೀತೆಯೊಂದಿಗೆ ಹಣತೆಯನ್ನು ಬೆಳಗಿಸಿ ಆಚರಿಸಲಾಯಿತು. ಶಾಲಾ ಶಿಕ್ಷಕರಾದ ಮಂಜುನಾಥ್ ವೀರ ಸೈನಿಕರ ಕುರಿತು ಸ್ವರಚಿತ ಕವನ ವಾಚನ ಮಾಡಿದರು. ವೀರ ಸೈನಿಕರ ಸಾಹಸದ ಕುರಿತು ಸಾಕ್ಷ್ಯಚಿತ್ರವನ್ನು ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮೋಹನ್‍ದಾಸ್, ಲತಾಂಜಲಿ ಎಸ್ ರೈ, ಶಿಕ್ಷಕ- ಶಿಕ್ಷಕೇತರರು ಉಪಸ್ಥಿತರಿದ್ದರು.

Exit mobile version