Site icon Ullalavani

ತೊಕ್ಕೊಟ್ಟು: ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಆಟಿದ ಗಮ್ಮತ್ -2019

UN NETWORKS

ತೊಕ್ಕೊಟ್ಟು: ತುಳುನಾಡು ವಿಶೇಷ ಸಂಸ್ಕೃತಿಗಳ ನೆಲೆಬೀಡು. ದೈವರಾಧನೆ, ನಾಗಾರಾಧನೆ, ಪ್ರಕೃತಿಗಳ ಆರಾಧನೆ ಜತೆ ಯಕ್ಷಗಾನ, ಪಾಡ್ದನದಂತಹ ಸಾಂಸ್ಕೃತಿಕದ ಭಂಡಾರವಿದು. ಈ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಅರಿಯಬೇಕು ಎಂದು ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಹೇಳಿದರು.

ಉಳ್ಳಾಲ ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿಯ ವತಿಯಿಂದ ಭಾನುವಾರ ನಡೆದ ಆಟಿದ ಗಮ್ಮತ್ -2019 ಉದ್ಘಾಟಿಸಿ ಅವರು ಮಾತನಾಡಿ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಿದರು.
ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ ದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಬೆಳರಿಂಗೆ ಕಿನ್ಯ ಭಂಡಾರಮನೆ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ. ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ, ವೇದಿಕೆಯ ಕಾರ್ಯಧ್ಯಕ್ಷ ಸತೀಶ್ ಕರ್ಕೇರ, ಕೊಲ್ಯ ಬಿಲ್ಲವ ಸಂಘದ ಅಧ್ಯಕ್ಷ ವೇಣು ಗೋಪಾಲ್, ತಲಪಾಡಿ ಬಿಲ್ಲವ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ವೇದಿಕೆಯ ದತ್ತು ಸಂಚಾಲಕ ಆನಂದ ಕೆ. ಅಸೈಗೋಳಿ, ಉಪಾಧ್ಯಕ್ಷ ಹರೀಶ್ ಮುಂಡೋಳಿ, ಕೋಶಾಧಿಕಾರಿ ಲಕ್ಷ್ಮಣ್ ಪೂಜಾರಿ ಹಾಗೂ ಕಾರ್ಯದರ್ಶಿ ಹರೀಶ್ ಅಂಬ್ಲಮೊಗರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ವಿವಿಧ ಮನೋರಂಜನಾ ಕ್ರೀಡೆ, ಪ್ರಶ್ನಾವಳಿ, ಸಂಗೀತ ಕಾರ್ಯಕ್ರಮ, ಸದಸ್ಯರ ಸ್ಕಿಟ್, ಹಾಸ್ಯ ನ್ಯತ್ಯ ರೂಪಕಗಳು ಜನರ ಮನ ರಂಜಿಸಿತು. ಸೆಲ್ಫೀ ವಿದ್ ತುಳುನಾಡ ಸ್ಪೆಷಲ್ ಫೊಟೊ ಸ್ಪರ್ಧೆ ನಡೆಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಶೇಷವಾಗಿ ಸಮಾಜದ ಮಹಿಳಾ ಬಂಧುಗಳು ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ಸುಮಾರು 42ಬಗೆಯ ತಿನಸುಗಳು ಕಾರ್ಯಕ್ರಮದಲ್ಲಿ ಪ್ರಮುಖವಾಗಿತ್ತು.

ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕ್ರೀಡಾ ಕಾರ್ಯದರ್ಶಿ ಭಗವಾನ್ ದಾಸ್ ವಂದಿಸಿದರು.

Exit mobile version