Site icon Ullalavani

ಪ್ರಿಯತಮನಿಂದ ಇರಿತಕ್ಕೊಳಗಾಗಿದ್ದ ವಿದ್ಯಾರ್ಥಿನಿ ಚೇತರಿಕೆ

UN NETWORKS

ಉಳ್ಳಾಲ : ಪ್ರಿಯತಮನಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ಬಗಂಬಿಲ ನಿವಾಸಿ ಧೀಕ್ಷಾ (22) ಚೇತರಿಸಿಕೊಂಡಿದ್ದು, ದಾಖಲಾಗಿದ್ದ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ ವಾಡ್9ಗೆ ಬುಧವಾರ ಸ್ಥಳಾಂತರಿಸಲಾಗಿದೆ.

ಜು.29 ರಂದು ಶಕ್ತಿನಗರ ನಿವಾಸಿ ಸುಶಾಂತ್ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ದೀಕ್ಷಾಳಿಗೆ 12 ಬಾರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಬಳಿಕ ತನ್ನ ಕುತ್ತಿಗೆ ಭಾಗಕ್ಕೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದನು. ಇಬ್ಬರನ್ನು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿತ್ತು. ಸುಶಾಂತ್ ಎರಡೇ ದಿನದಲ್ಲಿ ಚೇತರಿಸಿಕೊಂಡಿದ್ದು, ಉಳ್ಳಾಲ ಪೊಲೀಸರು ಸಂಪೂರ್ಣ ಚೇತರಿಸಿಕೊಂಡ ಎಂಟು ದಿನಗಳ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ , ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. 10 ದಿನಗಳ ಕಾಲ ಧೀಕ್ಷಾ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲೇ ಮುಂದುವರಿದಿತ್ತು. ಘಟನೆ ನಡೆದು 25 ದಿನಗಳ ಬಳಿಕ ಧೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಬಹಳ ಸುಧಾರಣೆಯಾಗಿದೆ. ವಾರ್ಡಿಗೆ ಸ್ಥಳಾಂತರಗೊಳಿಸಲಾಗಿದ್ದು, ಆಹಾರವನ್ನು ಸೇವಿಸುತ್ತಿದ್ದಾಳೆ. ದೇಹದೊಳಗಿನ ಗಾಯ ಮಾಸುವವರೆಗೆ ಚಿಕಿತ್ಸೆ ಮುಂದುವರಿದಿದೆ.

Exit mobile version