Site icon Ullalavani

ಉಳ್ಳಾಲ : ಭಾರಿ ಮಳೆಗೆ ವ್ಯಾಪಕ ಹಾನಿ

UN NETWORKS

ಉಳ್ಳಾಲ : ಉಳ್ಳಾಲದಾದ್ಯಂತ ಗಾಳಿ ಮಳೆಗೆ ಗುಡ್ಡಕುಸಿತಕ್ಕೆ ಎರಡು ಮನೆಗಳು ಹಾನಿಯಾದರೆ, ಮರಗಳು ಉರುಳಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ಯೇನೆಪೊಯ ಬಳಿ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಲೇನ್‍ಗೆ ಮರಬಿದ್ದು ರಾತ್ರಿಯಿಡೀ ವಿದ್ಯುತ್‍ನಿಂದ ಜನತೆ ವಂಚಿತರಾದರೆ, ಅಲ್ಲಲ್ಲಿ ಮರ, ಗುಡ್ಡ ಕುಸಿತದಂತಹ ಸಣ್ಣಪುಟ್ಟ ಘಟನೆಗಳು ವರದಿಯಾಗಿದೆ.

ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಗುಡ್ಡ ಕುಸಿದು ಮದಕ ನಿವಾಸಿಗಳಾದ ಅಬ್ಬಾಸ್ ಮತ್ತು ರಝಾಕ್ ಎಂಬವರ ಮನೆಗಳಿಗೆ ಹಾನಿಯಾದರೆ ವಿದ್ಯುತ್ ಕಂಬವೊಂದು ಧರೆಗುರುಳಿದೆ. ಘಟನೆಯ ವೇಳೆ ಮನೆಯವರ ಸಮಯ ಪ್ರಜ್ಞೆಯಿಂದ ಅನಾಹುತ ಸಂಭವಿಸಿಲ್ಲ. ಕಳೆ ವರ್ಷದ ಮಳೆಗಾಲದಲ್ಲೂ ಇದೇ ಗುಡ್ಡ ಜರಿದು ಸುಮಾರು ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು ಮನೆ ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.

ವಿದ್ಯುತ್ ಸರಬರಾಜಿನ ಮುಖ್ಯಲೇನ್‍ಗೆ ಹಾನಿ : ಸಂಜೆ ಸರಿದ ಗಾಳಿ ಮಳೆಗೆ ಯೇನೆಪೊಯ ಆಸ್ಪತ್ರೆ ಬಳಿ ದೊಡ್ಡದೊಮದಿ ಮರ ಉರುಳಿ ಕೊಣಾಜೆ ಉಪಕೇಂದ್ರದಿಂದ ಉಳ್ಳಾಲ ಕೇಂದ್ರಕ್ಕೆ ವಿದ್ಯುತ್ ಪೂರೈಸುವ ಮುಖ್ಯ ಲೈನ್ ತುಂಡಾಗಿ ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕತ್ತಲಾವರಿಸಿದೆ. ಉಳಿದಂತೆ ಮುಂಡೋಳಿ ಬಳಿ 5 ವಿದ್ಯುತ್ ಕಂಬ, ಗುಡ್ಡೆಮಾರ್ ಬಳಿ 3 ವಿದ್ಯುತ್ ಕಂಬ, ಬಗಂಬಿಲ ಬಳಿ 2 ವಿದ್ಯುತ್ ಕಂಬ , ಉಚ್ಚಿಲ ಆಳ್ವಾರಿಸ್, ಮದಕ ಬಳಿ ತಲಾ ಒಂದೊಂದು ಕಂಬಗಳು ಧರೆಗುರುಳಿದ್ದು ಈ ವ್ಯಾಪ್ತಿಯಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯವಾಗಿದೆ. ಈ ಪ್ರದೇಶದಲ್ಲಿ ಮರಗಳು ಉರುಳಿದ ಮತ್ತು ಗುಡ್ಡ ಕುಸಿತದಂತಹ ಸಣ್ಣಪುಟ್ಟ ಘಟನೆಗಳು ನಡೆದಿದ್ದು ಯಾವುದೇ ಇಈವ ಹಾನಿಯಾದ ಕುರಿತು ವರದಿಯಾಗಿಲ್ಲ.

ಬೀಚ್ ರಸ್ತೆ ಅಪಾಯದಲ್ಲಿ : ಉಳ್ಳಾಲ , ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರದ ಅಬ್ಬರ ಹೆಚ್ಚಿದ್ದು ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಅಪಾಯದಲ್ಲಿದೆ. ರ್ಸತೆಯ ತಳಪಾಯದವರೆಗೆ ಕಡಲ್ಕೊರೆತವಾಗಿದ್ದು, ಗಾಳಿ ಹೆಚ್ಚಾಗಿ ಬೀಸಿದರೆ ರಸ್ತೆ ಕುಸಿಯುವ ಭೀತಿಯಿದೆ.

Exit mobile version