UN NETWORKS
ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತವಾಗಿದ್ದುಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಸಮುದ್ರ ಪಾಲಾಗುವ ಭೀತಿಯಲ್ಲಿದೆ.
ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಗಾಗಿ ಬಟ್ಟಪ್ಪಾಡಿಯಲ್ಲಿ ಹಾಕಿರುವ ತಡೆದಂಡೆಯಿಂದ ಆ ಪ್ರದೇಶದಲ್ಲಿ ಕಡಲತೀರ ರಕ್ಷಣೆಯಾದರೆ ಸಮುದ್ರದ ಅಲೆ ಬಟ್ಟಪ್ಪಾಡಿಯ ಇನ್ನೊಂದು ಭಾಗಕ್ಕೆ ತೀವ್ರ ಹಾನಿ ಮಾಡಿದ್ದು ಇದೀಗ ಬೀಚ್ ರಸ್ತೆಯೇ ಕೊಚ್ಚಿ ಹೋಗುವ ಭೀತಿಯಿದೆ. ಉಚ್ಚಿಲ ಎಂಡ್ ಪಾಯಿಂಟ್ ಸೇರಿದಂತೆ ಸುಮಾರು 15ಕ್ಕು ಹೆಚ್ಚು ಮನೆಗಳಿಗೆ ಸಂಪರ್ಕ ಕಡಿಯುವ ಭೀತಿಯಲ್ಲಿದೆ. ಮೆಸ್ಕಾಂ ಇಲಾಖೆಯವರು ರವಿವಾರ ನಾಲ್ಕು ಕಂಬಗಳನ್ನು ಸ್ಥಳಾಂತರ ಮಾಡಿದ್ದು, ನಿರಂತರವಾಗಿ ಗಾಳಿ ಮಳೆ ಬಂದರೆ ರಸ್ತೆ ಸಮುದ್ರಪಾಲಾಗಲಿದೆ.