UN NETWORKS
ಉಳ್ಳಾಲ : ಯುವಸಮುದಾಯ ಕೆಲಸ ಪಡೆದುಕೊಂಡ ತಕ್ಷಣ ಹೆತ್ತವರನ್ನು, ಸಮುದಾಯವನ್ನು ಮರೆಯುವಂತಹ ಕೆಲಸ ಮಾಡುತ್ತಿದೆ. ಆದರೆ ಅಂತಹ ಮನಸ್ಥಿತಿಯ ನ್ನು ದೂರವಾಗಿಸಿ ಶಿಕ್ಷಣದ ಸಂದರ್ಭ ತ್ಯಾಗ ಮಾಡಿದ ಹೆತ್ತವರು, ಸಂಘಟನೆಗಳನ್ನು ಸ್ಮರಿಸುತ್ತಾ ಮುಂದುವರಿಯುವುದು ಉತ್ತಮ ನಡೆ ಎಂದು ಇನ್ಫೋಸಿಸ್ ಸಂಸ್ಥೆ ಮಂಗಳೂರು ಕೇಂದ್ರ ಮುಖ್ಯಸ್ಥ ವಾಸುದೇವ ಕಾಮತ್ ಅಭಿಪ್ರಾಯಪಟ್ಟರು.
ಅವರು ಕುಂಪಲದ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಸೇವಾ ಸಮಿತಿ ಇದರ ವತಿಯಿಂದ ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಭಾನುವಾರ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಪುರಸ್ಕಾರ-2019 ಪ್ರಧಾನ ಮಾಡಿ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಿಗ್ಗೀ, ಉಬರ್ ಈಟ್ಸ್, ಝೊಮೆಟೊ ಕಾಲದಲ್ಲಿ ಆಟಿದ ಕೂಟದ ತಿಂಡಿ ತಿನುಸುಗಳು ರುಚಿಕರವಾಗುತ್ತದೆ.ಜ್ಞಾನದೀವಿಗೆ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಜೀವನದ ಮೊದಲ ಹಂತವನ್ನು ಗೆದ್ದಿರುವಿರಿ, ಭವಿಷ್ಯದಲ್ಲಿ ದೊಡ್ಡ ಹಂತಗಳನ್ನು ಯಶಸ್ವಿಯಾಗಿ ಪೂರೈಸಲು ಮುನ್ನ ಡೆಯಬೇಕಿದೆ. ಮಾಡುವ ಕೆಲಸದಲ್ಲಿ ಬದ್ಧತೆಯಿದ್ದಲ್ಲಿ ಜೀವನದ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಪ್ರತಿಯೊಬ್ಬ ಪಡೆಯುವ ಶಿಕ್ಷಣದಿಂದ ಹೆತ್ತವರು ಸಾಧಿಸುವುದಲ್ಲ, ಬದಲಾಗಿ ತಮ್ಮ ಜೀವನದ ಯಶಸ್ಸನ್ನು ರೂಪಿಸುವುದಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಕನಸುಗಳನ್ನು ನನಸಾಗಿಸಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಮಾತೃಭೂಮಿ ಸೇವಾ ಪ್ರತಿಷ್ಠಾನದ ಜಿಲ್ಲೆಯ ಅಧ್ಯಕ್ಷ ಕೆ.ಟಿ ಸುವರ್ಣ ತೊಕ್ಕೊಟ್ಟು ಉದ್ಘಾಟಿಸಿ ಮಾತನಾಡಿ ಕುಂಪಲ ಬಾಲಕೃಷ್ಣ ಮಂದಿರ ಸಂಘಟನೆಯ ಮೂಲಕ ಎಲ್ಲರನ್ನು ಒಗ್ಗಟ್ಟಾಗಿಸುವ ಕಾರ್ಯ ಮಾಡುತ್ತಿರುವ ಕಾರ್ಯ ಮಹತ್ತರವಾದುದು. ಇನ್ಫೋಸಿಸ್ ಸಂಸ್ಥೆ ಕುಂಪಲ ಗ್ರಾಮವನ್ನು ದತ್ತು ಪಡೆದುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕಿದೆ. ವಿದ್ಯಾರ್ಥಿಗಳು ಮಂದಿರದಿಂದ ಪಡೆದುಕೊಂಡ ಸಹಕಾರವನ್ನು ಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ವಿದ್ಯಾರ್ಥಿ ಗಳಿಗೆ ಪೆÇ್ರೀತ್ಸಾಹಿಸುವ ಕಾರ್ಯದಲ್ಲಿ ತೊಡಗಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ಫೋಸಿಸ್ ಸಂಸ್ಥೆ ಪ್ರಾದೇಶಿಕ ಮುಖ್ಯಸ್ಥ ಹರೀಶ್ ಜೆ. ಕೊಲೆಕಾಡಿ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ನಿವೃತ್ತ ಸೇನಾನಿಗಳ ಸಂಘದ ಅಧ್ಯಕ್ಷ ಕೆ.ಸಿ ನಾರಾಯಣ ಸೋಮೇಶ್ವರ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಖ್ಯಾತ ನ್ಯಾಯವಾದಿ ಯಶೋದರ ಕರ್ಕೇರ, ಕಾರ್ಕಳದ ಉದ್ಯಮಿ ಸುಧಾಕರ್ ರಾವ್ ಬಹುಮಾನ್, ಬಜಾಜ್ ಫೈನಾನ್ಸ ಪ್ರಬಂಧಕ ಸಚಿನ್ ಮೋರೆ, ಉದ್ಯಮಿ ನಾರಾಯಣ ಪೂಜಾರಿ ಗಂಜಿಮಠ ಮುಖ್ಯ ಅತಿಥಿಗಳಾಗಿದ್ದರು.
ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಪ್ರ.ಕಾರ್ಯದರ್ಶಿ ರವೀಂದ್ರ ಕುಂಪಲ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಮಾಲತಿ ಕೇಶವದಾಸ್, ಉತ್ಸವ ಸಮಿತಿ ಗೌರವಾಧ್ಯಕ್ಷ ಸೋಮಶೇಖರ್ ಕೆ. ಜಗನ್ನಾಥ್, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.
ವೆಂಕಟೇಶ್ ಕುಂಪಲ, ಮಾಧವ ಬಂಗೇರ, ಪ್ರವೀಣ್ ಕುಲಾಲ್, ಗಣೇಶ್ ಶಿಲ್ಪಿ, ಶಿವಾನಂದ ಟೈಲರ್ , ಚಂದ್ರಹಾಸ್ ಮೂರುಕಟ್ಟೆ, ಅಶೋಕ್ ಕುಂಪಲ, ಕಿಶೋರ್ ಡಿ.ಕೆ, ಗೋಪಾಲಕೃಷ್ಣ ರಾವ್, ನಾಗೇಶ್ ಎಂ.ಆರ್ ಭಾಗವಹಿಸಿದ್ದರು. 2019 ರ ಆಟಿದ ಸನ್ಮಾನ ವನ್ನು ಲಕುಮಿ ನಾಟಕ ತಂಡದ ಕಿಶೋರ್ ಡಿ. ಶೆಟ್ಟಿ ಇವರಿಗೆ ಪ್ರಧಾನ ಮಾಡಲಾಯಿತು. ಕುಂಪಲದ ಪ್ರತಿಭಾನ್ವಿತ ವಿದ್ಯಾರ್ಥಿನಿ , ಸರಕಾರಿ ಶಾಲೆಯಲ್ಲಿ ಕಲಿತು ಎಂಬಿಬಿಎಸ್ ನಲ್ಲಿ ಮೆರಿಟ್ ಸೀಟ್ ಪಡೆದುಕೊಂಡ ವಿದ್ಯಾರ್ಥಿನಿ ಸೆಲಿನಾ ಪ್ರೀತಿ ಪಿಂಟೋ ಇವರನ್ನು ಸನ್ಮಾನಿಸಲಾಯಿತು. ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಪ್ರವೀಣ್. ಯಸ್ ಕುಂಪಲ ನಿರೂಪಿಸಿದರು. ಚಂದ್ರಶೇಖರ್ ಬಿ.ಜೆ ಪುರಸ್ಕಾರದ ವರದಿ ವಾಚಿಸಿದರು. ಕೃಷ್ಣ ಪೊನ್ನತೋಡು ವಂದಿಸಿದರು.
ಕುಂಪಲದ ಪ್ರತಿಭೆ ಈಗ ಎಂಬಿಬಿಎಸ್ ವಿದ್ಯಾರ್ಥಿನಿ !
`ಕುಂಪಲದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 609 ಶೇ.97.44 ಅಂಕ ಪಡೆದ ಕುಂಪಲ ನಿವಾಸಿ ಸೆಲೀನಾ ಪ್ರೀತಿ ಪಿಂಟೋ ಅನ್ನುವ ವಿದ್ಯಾರ್ಥಿನಿ ಇದೀಗ ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿನಿ ಯಾಗಿದ್ದಾಳೆ. ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸರಕಾರಿ ಸೀಟನ್ನೇ ಪಡೆದು ಕಂಕನಾಡಿಯ ಫಾದರ್ ಮುಲ್ಲಸ್ 9 ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಯಾಗಿ ಕಲಿಯುತ್ತಿದ್ದಾಳೆ. ದಿನಗೂಲಿ ಕಾರ್ಮಿಕ ಲೂಯಿಸ್ ಪಿಂಟೋ ಹಾಗು ಸುನೀತಾ ದಂಪತಿಗಳ ಪುತ್ರಿಯಾಗಿರುವ ಸೆಲೀನಾ ಪಿಯುಸಿ ಪರೀಕ್ಷೆಯಲ್ಲಿ 576(96%) ವಿಜ್ಞಾನ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದು ಮಾದರಿಯಾಗಿದ್ದಳು. ಬಲ್ಮಠ ಮಹಿಳೆಯರ ಕಾಲೇಜಿನಲ್ಲಿ ಪಿಯು ಕಾಲೇಜು ಶಿಕ್ಷಣ ಪಡೆದು ಕಾಲೇಜಿಗೂ ಮಾದರಿಯಾಗಿದ್ದಳು.
ಇನ್ಫೋಸಿಸ್ ಚೇತನ ಸಹಕಾರಿಯಾಯಿತು : ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಸಂಸ್ಥೆ ಹಮ್ಮಿಕೊಳ್ಳುವ ಚೇತನ ಕಾರ್ಯಕ್ರಮ ಎಂಬಿಬಿಎಸ್ ಮೆರಿಟ್ ಸೀಟ್ ಪಡೆಯಲು ಸಹಕಾರಿಯಾಯಿತು. ಚೇತನ ಅನ್ನುವ ಕಾರ್ಯಕ್ರಮದ ಮೂಲಕ ಇನ್ಫೋಸಿಸ್ ಸಂಸ್ಥೆ ಟ್ಯಾಬ್ ವಿತರಿಸಿತ್ತು. ಇದು ಮೊದಲ ಬಾರಿಗೆ ಲಿ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸಿಗದೇ ಮತ್ತೆ ಒಂದು ವರ್ಷ ಕುಳಿತು ತನಗೆ ಸಿಕ್ಕಿದ್ದ ಟ್ಯಾಬ್ ಮೂಲಕ ಅಧ್ಯಯನ ನಡೆಸಿದ ಫಲವಾಗಿ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ರ್ಯಾಂಕ್ ಗಳಿಸಲು ಸಹಕಾರಿಯಾಯಿತು. ಅದೇ ರೀತಿ ತನ್ನ ಪ್ರತಿಭೆಗೆ ಕುಂಪಲ ಬಾಲಕೃಷ್ಣ ಮಂದಿರ ಬಹಳ ಪ್ರೋತ್ಸಾಹಿರುವುದನ್ನು ಸ್ಮರಿಸಿಕೊಂಡರು.