Site icon Ullalavani

ಡೆಂಗ್ಯೂ ಜ್ವರಕ್ಕೆ ಮಂಗಳೂರಿನ ಬಾಲಕಿ ಬಲಿ

UN NETWORKS

ಉಳ್ಳಾಲ : ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಮಾರಣಾಂತಿಕ ಜ್ವರಕ್ಕೆ ನಗರದ ಏಳನೇ ತರಗತಿಯ ಬಾಲಕಿಯೋರ್ವಳು ಬಲಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಮಂಗಳೂರಿನ ಜಪ್ಪು – ಮೋರ್ಗನ್‌ ಗೇಟ್‌ ನಿವಾಸಿ ಕಿಶೋರ್‌ ಶೆಟ್ಟಿಯವರ ದ್ವಿತೀಯ ಪುತ್ರಿ ಶ್ರದ್ಧಾ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ. ಶ್ರದ್ಧಾ ನಗರದ ಥೆರೆಸಾ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದರು.ಶ್ರದ್ಧಾಳ ಸಹೋದರಿ ಕೂಡಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ.

Exit mobile version