UN NETWORKS
ಉಳ್ಳಾಲ : ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಇದರ ವತಿಯಿಂದ, ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಸಂಘಟನೆಯ ಅಧ್ಯಕ್ಷರಾದ ಹನೀಫ್ ಶೈನ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಎಂಬ ಸಂಘಟನೆಯು ಉಳ್ಳಾಲ ಮೊಂಟೆಪದವು ಹತ್ತಿರವಿರುವ ಚಂದಹಿತ್ಲು ವಿನ ಕುಟುಂಬದ ಒಕ್ಕೂಟವಾಗಿದ್ದು ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ರಹ್ಮಾನ್ ಚಂದಹಿತ್ಲು, ಸಂಘಟನೆಯ ಕಾರ್ಯದರ್ಶಿ ಶಾಕೀರ್ ಚಂದಹಿತ್ಲು, ಕೋಶಾಧಿಕಾರಿ ಅಬ್ಬಾಸ್ NH ಮೊಂಟೆಪದವು, ಹೈದರ್ ಮೊಂಟೆಪದವು, ಖಲೀಲ್ ಮೊಂಟೆಪದವು, ಅಯ್ಯೂಬ್ ಮೂಡಿಗೆರೆ, ಅಬ್ಬಾಸ್ ಆಸರ್, ಅಶ್ರಫ್ ಕೊಡೆಂಚಿಲ್, ಸಿದ್ಧೀಕ್ ಮಜಲು, ಸಿರಾಜ್ ಕಿನ್ಯಾ ಮತ್ತು ಇತರರು ಉಪಸ್ಥಿತರಿದ್ದರು.